January 18, 2025
KAVANA

ಪ್ರತಿ ಮನೆ ಮನವು ಹಾತೊರೆಯುವ ಕನಸಿನ ಕೂಸು….
ಧರೆಗಿಳಿಯುವ ಕ್ಷಣಕ್ಕಾಗಿ ಕಾತರಿಸುತ್ತಿದೆ ಅವಳ ಮನಸು…
ಸಿದ್ಧತೆ ಮಾಡಿಕೊಂಡಿರುವಳು ತಾನು ತಾಯಿಯಾಗುವೆನೆಂಬ ಸಂಭ್ರಮದಿ….
ತನ್ನ ನೋವ ಮರೆತು ಕಂದನಿಗಾಗಿ ನಸುನಗುವಳು ಹರುಷದಿ…
ಆ ಕಂದನ ಮೊದಲ ಸ್ಪರ್ಶ ಸುಖವ ಅನುಭವಿಸಲು ಕಾಯುತಿಹಳು ಕಾತರದಿ….
ಮಗುವಿನ ಮೊದಲ ಕೂಗನು ಕೇಳಲು ತನ್ನ ಶ್ರವಣವ ಜಾಗೃತವಾಗಿಸಿಹಳು ಬಲು ಎಚ್ಚರದಿ…
ನವಮಾಸ ತುಂಬಿ ಅವಳಲ್ಲಿ ಮಾತೃತ್ವ ಜಾಗೃತವಾಗಿದೆ…
ಕುಡಿಯೊಂದು ಜೀವ ತಳೆದು ಭೂಮಿಗಿಳಿಯುವ ಹೊಸ ಹುಮ್ಮಸ್ಸು ಹೆಚ್ಚಾಗಿದೆ….
ಮಾತೃ ಸುಖದ ಅನುಭವ ಕ್ಷಣಕ್ಷಣವೂ ಅವಳಿಗಾಗುತಿದೆ…
ಮಮತೆಯ ಮಡಿಲು ಸೇರಲು ಆ ಕಂದಮ್ಮ ತವಕಿಸುತಿದೆ….

 

ಸುಪ್ರೀತ ಭಂಡಾರಿ ಸೂರಿಂಜೆ

1 thought on “ಕಂದನ ಮೊದಲ ಸ್ಪರ್ಶ ಸುಖವ ಅನುಭವಿಸಲು ಕಾಯುತಿಹಳು ಕಾತರದಿ………..

Leave a Reply

Your email address will not be published. Required fields are marked *