January 18, 2025
featured

ಪ್ರಾರ್ಥನೆ

ಎಂದು ಬರುವುದು ನಿನ್ನ ಜೊತೆ 
ಕಳೆಯುವ ಆದಿನ…..
ನಾ ಕಾತುರದಿ ಕಾದಿರುವೆ
ಪ್ರತಿದಿನ…..

ಯಾಕೋ ನಿನ್ನ ಮೇಲೆ ಪ್ರೀತಿ
ಹುಟ್ಟಿದೆ ನನ್ನಲ್ಲಿ…..
ನನ್ನ ಮನದಲ್ಲಿರುವ ಭಾವನೆಯನ್ನು
ಹೇಗೆ ಹೇಳಲಿ ನಿನ್ನಲ್ಲಿ…..

ಓ ದೇವರೆ ನಾ ಪ್ರೀತಿಸಿದವಳು
ನನಗೆ ಸಿಗುವಂತೆ ಮಾಡು…..
ನಾ ಪ್ರೀತಿಸಿದವಳನ್ನು ಸಂತೋಷದಿಂದ
ನೋಡಿಕೊಳ್ಳುವ ಶಕ್ತಿ ನೀ ನೀಡು……

 

 

ಅಹವಾಲು

ಓ ದೇವರೇ…ನನಗೇ ಯಾಕೆ ಇಂತಹ
ಕಷ್ಟ ಕೊಡುತ್ತಿರುವೆ…?
ನಾ ನಿನಗೆ ಏನು ಮಾಡಿದ್ದೆ 
ನನ್ನನ್ಯಾಕೆ ಸಂಕಷ್ಟಕ್ಕೆ ಸಿಲುಕಿಸುತ್ತಿರುವೆ…?

ನಾ ಇಷ್ಟ ಪಟ್ಟದ್ದನ್ನೆಲ್ಲಾ
ನನ್ನಿಂದ ಕಸಿದುಕೊಂಡೆ…!
ನನ್ನ ಬದುಕಿನ ಸುಖವನ್ನೆಲ್ಲಾ
ನೀನೇಕೆ ಕಿತ್ತುಕೊಂಡೆ…?

ದಯವಿಟ್ಟು ಇನ್ನಾದರೂ ನನ್ನನ್ನು
ನನ್ನ ಪಾಡಿಗೆ ಬಿಟ್ಟುಬಿಡು…
ನನ್ನ ಈ ಪಾಡನ್ನು ನೋಡಿ ನಗುತ್ತಿರುವೆಯಾ
ತಂದೆ ನನ್ನನ್ನೊಮ್ಮೆ ಕ್ಷಮಿಸಿ ಬಿಡು…!!!

 

 

 

 

 

 

✍ ರತೀಶ್ ಭಂಡಾರಿ ಕುಂಜಿಬೆಟ್ಟು.

Leave a Reply

Your email address will not be published. Required fields are marked *