“ವಿಶ್ವ ಪರಿಸರ ದಿನ.”
ಆರನೇ ತಿಂಗಳ ಐದನೇ ದಿನ
ಈ ದಿನ ವಿಶ್ವ ಪರಿಸರ ದಿನ.
ಸ್ವಸ್ಥ ಪರಿಸರದ ಅರಿವಿಗೆ ಮನ.
ವಿಶ್ವ ಜಾಗೃತಿಗೆ ನೆರವಿನ ನಮನ.
ನಮ್ಮ ಪರಿಸರದ ಬಗ್ಗೆ ಗಮನ
ಮಾಡಬೇಕಾಗಿದೆ ವಾತಾವರಣ ಜತನ.||
ಕಲುಷಿತಗೊಂಡಿದೆ ವಾತಾವರಣ ವಿಷಯುಕ್ತ.
ಆಗುವುದೆಂದೋ ಪರಿಸರ ಪ್ಲಾಸ್ಟಿಕ್ ಮುಕ್ತ.
ಪ್ಲಾಸ್ಟಿಕ್ ಚೀಲ ಪ್ಲಾಸ್ಟಿಕ್ ದಾರ ಪರಿತ್ಯಕ್ತ.
ಬಟ್ಟೆ ಚೀಲ ಪೇಪರ್ ಪೊಟ್ಟಣ ಸೂಕ್ತ.||
ವಾರ್ಷಿಕ ಜೂನ್ ಐದರ ಈ ದಿನ.
ವಿಶ್ವಕೆ ಪರಿಸರ ಜಾಗೃತಿ ಮೂಡಿಸುವ ದಿನ.
ಕಣ್ಮರೆಯಾಗಿದೆ ದಟ್ಟ ಕಾಡು ಕಾನನ.
ಕೇಳುವವರಿಲ್ಲ ಜೀವ ಜಂತುಗಳ ರೋಧನ.||
ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ.
ಇಲ್ಲವೆ ಜೀವ ಜಗತ್ತಿಗೆ ಸಂಚಕಾರ ಸಂಭಾವ್ಯ.
ಹಸಿರು ಉಸಿರಿನ ಅನುಬಂಧ ಚಿರಬಾಂಧವ್ಯ.
ಮನುಕುಲ ಅರಿಯಲಿ ಜಗ ನಮದು ಭವ್ಯ… ದಿವ್ಯ… ನವ್ಯ.||
✍
ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.