“ಸೋಲು-ಗೆಲುವು”
ಇಂದು ಸೋತರೆ ಏನಂತೆ…..
ಇಂದು ಗೆದ್ದವರು ನಾಳೆ ಸೋಲಬಹುದು ನಿನ್ನಂತೆ…..
ಸೋತೆಯೆಂದು, ಇನ್ನಾಗುವುದಿಲ್ಲವೆಂದು ಬಿಡಬೇಡ ಛಲ…..
ನೊಂದುಕೊಂಡು ಜೀವ ಕಳೆದುಕೊಂಡರೇನು ಫಲ…..
ಇಂದು ಕಳೆದೋದದನ್ನು ಎಂದಾದರೂ ಮರಳಿ ಪಡೆಯಬಹುದು…..
ಪ್ರಾಣ ಒಮ್ಮೆ ಕಳೆದುಕೊಂಡರೆ ಮಗದೊಮ್ಮೆ ಹೇಗೆ ಪಡೆಯುವುದು…..
✍ ರತೀಶ್ ಭಂಡಾರಿ ಕುಂಜಿಬೆಟ್ಟು.
“ಕಲಾಪ್ರತಿಭೆ.”
ಪ್ರತಿಭೆಗಳು ಬೆಳೆಯಲು ಬೇಕಾಗಿರುವುದು ಎಲ್ಲರ ಪ್ರೋತ್ಸಾಹದ ಮಾತುಗಳು…..
ನಿಮ್ಮ ಚಿಕ್ಕ ಪ್ರೋತ್ಸಾಹದಿಂದ ಅವರು ಮಾಡಬಹುದು
ದೊಡ್ಡ ಸಾಧನೆಗಳು …..
ತಪ್ಪಿದ್ದನ್ನು ತಿಳಿಸುವುದರಿಂದ ಅವರು ಅದನ್ನು ಸರಿ ಮಾಡಿಕೊಳ್ಳಬಹುದು…..
ಅದನ್ನು ಬಿಟ್ಟು ಬೆನ್ನಹಿಂದೆ ಕೊಂಕು ಮಾತಾನಾಡಿದರೆ ಕಲೆಯನ್ನು ಕೊಲೆಮಾಡಿದಂತಾಗಬಹುದು …..
ಪ್ರತಿಭೆಗಳೇ ಹೊಸ ಪ್ರಯತ್ನ ಮಾಡಲು ಹೊರಟರೆ ಕೆಲವರು ಹೀಯಾಳಿಸುವುದು ಸಹಜ…..
ಅಡೆತಡೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮುನ್ನಡೆದರೆ ಗೆಲುವು ನಿನ್ನದೇ ಮನುಜ ….
✍ ರತೀಶ್ ಭಂಡಾರಿ ಕುಂಜಿಬೆಟ್ಟು.
“ಜೀವ-ಜೀವನ”
ಜೀವನದಲ್ಲಿ ಕಹಿ ಘಟನೆಗಳು ನಡೆಯುವುದು ಸಹಜ…..
ನೊಂದುಕೊಂಡು ಜೀವ ಕಳೆದುಕೊಳ್ಳುವುದು ಮೂರ್ಖತನ ಮನುಜ…..
ಬೇರೆಯವರ ಕೊಂಕು ಮಾತಿಗೆ ತಲೆ ಕೆಡಿಸಿಕೊಳ್ಳದೆ ಮುಂದುವರಿಯುವುದೇ ಜೀವನ…..
ಎದೆಗುಂದದೆ ಸಾಧನೆಯ ಶಿಖರವನ್ನೇರಿ ಮಾಡಿಕೊ ಜನ್ಮ ಪಾವನ ….
ಕಳೆದುಕೊಂಡ ವಸ್ತುಗಳನ್ನು ಮರಳಿಪಡೆಯಬಹುದು…..
ಆದರೆ ಒಮ್ಮೆ ಕಳೆದುಕೊಂಡ ಜೀವವನ್ನು ಮತ್ತೆ ಪಡೆಯಲಾಗದು…..
✍ ರತೀಶ್ ಭಂಡಾರಿ ಕುಂಜಿಬೆಟ್ಟು.
“ಬಿಟ್ಟು ಹೋದ ಗೆಳೆಯ.”
ಅಂತರ್ಜಾಲ ದ ಮುಖಾಂತರ ಪರಿಚಯವಾದೆ ನೀ…..
ಮಾತಾಡಿ ಮಾತಾಡಿ ಹತ್ತಿರವಾದೆ ನೀ…..
ಏನಿದ್ದರೂ ಹಂಚಿಕೊಳ್ಳುತ್ತಿದ್ದೆವು ನಾವಿಬ್ಬರೂ…..
ನಿನ್ನಿಂದಾಗಿ ನಾ ಕಲಿತೆನು ಗೊತ್ತಿರದ ವಿಷಯವು ಹಲವಾರು…..
ನಾ ತಪ್ಪು ಮಾಡಿದರೆ ನನ್ನನ್ನು ತಿದ್ದುತ್ತಿದ್ದೆ ನೀ…..
ಏನು ಬೇಕಿದ್ದರೂ ಸಂಕೋಚವಿಲ್ಲದೆ ನನ್ನಲ್ಲಿ ಕೇಳುತ್ತಿದ್ದೆ ನೀ…..
ಆದರೆ, ನೀ ಪ್ರೀತಿಸಿದ ಪ್ರೇಯಸಿಗೋಸ್ಕರ ಬಿಟ್ಟು ಹೋದೆ ನನ್ನ…..
ಅರ್ಧ ಜೀವವೇ ಹೋದಾಂತಾಗಿದೆ ನನ್ನ…..
ಬಿಟ್ಟು ಹೋದೆಯ ನನ್ನ ಪ್ರೀತಿಯ ಗೆಳೆಯ…..
ಎಲ್ಲಿದ್ದರೂ ಖುಷಿಯಾಗಿರು ಬಯಸುವೆ ನಾ…..
ನೀ ಮರೆತರು ನನ್ನ…..
ನಾ ಮರೆಯಲಾರೆ ನಿನ್ನ…..
✍ ರತೀಶ್ ಭಂಡಾರಿ ಕುಂಜಿಬೆಟ್ಟು.
“ಚಟ-ಚಟ್ಟ.”
ಕೆಟ್ಟ ಚಟದಿಂದ ಹಾಳುಮಾಡಿಕೊಳ್ಳಬೇಡ ನಿನ್ನ ಜೀವನ…..
ಈ ಜೀವನದಲ್ಲಿ ಏನಾನ್ನದ್ದರೂ ಸಾಧಿಸಿ ಆಗೂ ಪಾವನ…..
ನಿನ್ನನ್ನು ಪ್ರೀತಿಸುವವರನ್ನು ಪ್ರೀತಿಯಿಂದ ನೋಡು…..
ಕೆಟ್ಟ ಚಟವನ್ನು ನಿನ್ನೊಳಗಿಂದ ಕಿತ್ತು ಬಿಡು…..
ಈ ಚಟದಿಂದ ನಿನ್ನನ್ನು ಪ್ರೀತಿಸುವವರಿಗೆ ಕೊಡಬೇಡ ದುಃಖ…..
ಅನುಭವಿಸು ಸಂಬಂಧದೊಳಗಿನ ಜೀವನದ ಸುಖ…..
✍ ರತೀಶ್ ಭಂಡಾರಿ ಕುಂಜಿಬೆಟ್ಟು.