January 18, 2025
7

ದಾಳಿಂಬೆ ಸಿಪ್ಪೆ ಈ ಎಲ್ಲಾ ಸಮಸ್ಯೆಗಳಿಗೆ ಅತ್ಯಾದ್ಭುತ ಮನೆಮದ್ದು ಗೊತ್ತಾ?

ಹಲವಾರು ಸಮಸ್ಯೆಗಳಿಗೆ ಪ್ರಕೃತ್ತಿಯಲ್ಲಿಯೇ ಮದ್ದು ಇರುತ್ತದೆ. ಆದರೆ ನಮಗೆ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲ್ಲ, ಗಂಭೀರ ಸಮಸ್ಯೆಗಳನ್ನೂ ಗುಣಪಡಿಸುವ ಮದ್ದುಗಳಿರುತ್ತದೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮನೆಮದ್ದುಗಳನ್ನು ಮಾಡಲಾಗುತ್ತಿತ್ತು, ಆದರೆ ಈಗ ನಮಗೆ ಅವುಗಳ ಬಗ್ಗೆ ಮಾಹಿತಿ ಕಮ್ಮಿ ಇದೆ.

ಮನೆಯಲ್ಲಿ ಹಿರಿಯರಿದ್ದರೆ ಸಣ್ಣಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಲು ಬಿಡುವುದೇ ಆದರೆ, ನಾವು ಚಿಕ್ಕ ಶೀತ ಬಂದರೂ ಆಸ್ಪತ್ರೆಗೆ ಹೋಗುತ್ತೇವೆ.

ದಾಳಿಂಬೆ ಸಿಪ್ಪೆಯಲ್ಲಿರುವ ಪ್ರಯೋಜನಗಳು’

ದಾಳಿಂಬೆ ಸಿಪ್ಪೆ ಕಹಿ ಹಾಗೂ ಒಗರು-ಒಗರಾಗಿರುತ್ತದೆ. ಇದು ಊತ ಕಡಿಮೆ ಮಾಡಲು. ಉರಿಯೂತ, ಬೇಧಿ, ರಕ್ತಸ್ರಾವ , ಅಜೀರ್ಣ , ಲಿವರ್ ಆರೋಗ್ಯಕ್ಕೆ ಬಳಸಲಾಗುವುದು. ಇದರ ಸಿಪ್ಪೆ ದಾಳಿಂಬೆ ಬೀಜಗಿಂತ ಪ್ರಯೋಜನಕಾರಿಯಂತೆ, ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶ ಅಧಿಕವಿರುತ್ತದೆ.

ದಾಳಿಂಬೆ ಸಿಪ್ಪೆಯನ್ನು ಈ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು

ಮೊಡವೆ ನಿವಾರಣೆಗೆ ಕೂಡ ಅತ್ಯುತ್ತಮವಾದ ಮನೆಮದ್ದು

ಆಯುರ್ವೇದ ಪ್ರಕಾರ ದಾಳಿಂಬೆ ಸಿಪ್ಪೆ ಆ್ಯಂಟಿವೈರಲ್ (ಸೋಂಕುಗಳ ವಿರುದ್ಧ ಹೋರಾಡುವ), ಆ್ಯಂಟಿಬ್ಯಾಕ್ಟಿರಿಯಾ (ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ) , ಆ್ಯಂಟಿಇನ್‌ಫ್ಲೇಮಟರಿ (ಉರಿಯೂತದ ಸಮಸ್ಯೆ ಕಡಿಮೆ ಮಾಡುವ) ಗುಣವನ್ನು ಹೊಂದಿದೆ. ತುಂಬಾ ಮೊಡವೆ ಸಮಸ್ಯೆ ಇರುವವರು ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ದಿನಾ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯ ಬೇಕು, ಹೀಗೆ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು. ಅಲ್ಲದೆ ಮೊಡವೆ ಕಲೆಗಳು ಕೂಡ ಕಡಿಮೆಯಾಗುವುದು.

ಕೂದಲು ಉದುರುವುದು ಹಾಗೂ ತಲೆಹೊಟ್ಟು ತಡೆಗಟ್ಟಲು ಸಹಕಾರಿ


ನಿಮಗೆ ತಲೆಹೊಟ್ಟಿನ ಸಮಸ್ಯೆ ಇದೆಯೇ ಈ ಅದ್ಭು ಮನೆಮದ್ದಿನಿಂದ ನಿಮ್ಮ ಸಮಸ್ಯೆಗೆ ಗುಡ್‌ಬೈ ಹೇಳಬಹುದು. ದಾಳಿಂಬೆ ಸಿಪ್ಪೆಯ ಪುಡಿಯನ್ನು ತೆಂಗಿನೆಣ್ಣೆ ಅಥವಾ ನೀವು ಕೂದಲಿಗೆ ಬಳಸುವ ಎಣ್ಣೆಯ ಜೊತೆ ಮಿಕ್ಸ್ ಮಾಡಿ ತಲೆಯ ಬುಡಕ್ಕೆ ಹಚ್ಚಿ 2 ಗಂಟೆ ಬಿಡಿ, 2 ಗಂಟೆಯ ಬಳಿಕ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆತೊಳೆಯಿರಿ.

ಗಂಭೀರ ಕಾಯಿಲೆಗಳಿಗೆ ದಾಳಿಂಬೆ ಸಿಪ್ಪೆಯ ಮನೆಮದ್ದು

ಮಧುಮೇಹ, ಹೃದಯಸ ಸಮಸ್ಯೆಗಳಿಗೂ ದಾಳಿಂಬೆ ಸಿಪ್ಪೆಯನ್ನು ಮನೆಮದ್ದಾಗಿ ಬಳಸಬಹುದು. ಒಂದು ಅಧ್ಯಯನದ ಪ್ರಕಾರ ದಾಳಿಂಬೆ ಸಿಪ್ಪೆ ಉರಿಯೂತದ ಸಮಸ್ಯೆ ಕಡಿಮೆ ಮಾಡಲು ಸಹಕಾರಿ. ಯಾರು ಅತ್ಯಧಿಕ ಮೈ ತೂಕ ಹೊಂದಿದ್ದು ಮಧುಮೇಹ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆ ಹೊಂದಿದ್ದಾರೂ ಅವರು ದಿನಾ 1000 mg ದಾಳಿಂಬೆ ಸಿಪ್ಪೆಯ ಪುಡಿ ಬಳಸಿದರೆ ಕೊಲೆಸ್ಟ್ರಾಲ್‌ ಹಾಗೂ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

ಬೇಧಿಗೆ ಅತ್ಯುತ್ತಮವಾದ ಮನೆಮದ್ದು

ಬೇಧಿ ಸಮಸ್ಯೆಗೆ ದಾಳಿಂಬೆ ಸಿಪ್ಪೆ ಪರಿಣಾಮಕಾರಿಯಾದ ಮನೆಮದ್ದು. 1 ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು 1 ಲೋಟ ನೀರಿಗೆ ಮಿಕ್ಸ್ ಮಾಡಿ ಕುಡಿದರೆ ತಕ್ಷಣ ಬೇಧಿ ನಿಲ್ಲುತ್ತದೆ. 1 ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದು ಅತ್ಯುತ್ತಮವಾದ ಮನೆಮದ್ದು. ಆದರೆ ಅರ್ಧ ಚಮಚ ದಾಳಿಂಬೆ ಪುಡಿ ಬಳಸಿ.

ದಾಳಿಂಬೆ ಪುಡಿ ಮಾಡುವುದು ಹೇಗೆ?

ದಾಳಿಂಬೆ ಸಿಪ್ಪೆಯನ್ನು ಚಿಕ್ಕದಾಗಿ ಕತ್ತರಿಸಿ ಒಣಗಿಸಿ, ತುಂಬಾ ಬಿಸಿಲಿನಲ್ಲಿ ಒಣಗಿಸುವುದಕ್ಕಿಂತ ನೆರಳಿನಲ್ಲಿ ಒಣಗಿಸಿ, ಸಿಪ್ಪೆ ತುಂಬಾ ಒಣಗಿದ ಮೇಲೆ ಅದನ್ನು ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಮನೆಮದ್ದಾಗಿ ಬಳಸಬಹುದು.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: BS

Leave a Reply

Your email address will not be published. Required fields are marked *