January 18, 2025
b7ce7442-d317-4125-bda2-59e3c0ed4d68

 

ಸಾಗರ ತಾಲೂಕು ಸವಿತಾ ಸಮಾಜ ಯುವ ಘಟಕದ ಅಧ್ಯಕ್ಷರಾಗಿ ಪ್ರದೀಪ್ ಭಂಡಾರಿ ಆಯ್ಕೆಯಾಗಿದ್ದಾರೆ.

ಆಗಸ್ಟ್ 9 ರ ಮಂಗಳವಾರ ಸೊರಬ ರಸ್ತೆಯ ಸುಭಾಷ್’ನಗರದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಯುವ ಘಟಕದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಯುವ ಘಟಕದ ಉಪಾಧ್ಯಕ್ಷರಾಗಿ ರಂಜಿತ್ ಕುಮಾರ್, ಕಾರ್ಯದರ್ಶಿಯಾಗಿ ಪ್ರಶಾಂತ್ ಕೆಳದಿ, ಖಜಾಂಚಿಯಾಗಿ ರಾಘವೇಂದ್ರ ಹಾಗೂ ನಿರ್ದೇಶಕರುಗಳಾಗಿ ಸುಬ್ರಹ್ಮಣ್ಯ, ಪ್ರಶಾಂತ್, ವೆಂಕಟೇಶ್, ಪ್ರಕಾಶ್ ಬೇಳೂರು, ಸುಮಂತ್, ಹರೀಶ್ ಮೆಳವರಿಗೆ, ಕೃಷ್ಣ, ಗಣೇಶ್ ಮೆಳವರಿಗೆ, ರಮೇಶ್ ರಾಮನಗರ, ಕೇಶವ ಇವರನ್ನು ಆಯ್ಕೆ ಮಾಡಲಾಗಿದೆ. ಇದಲ್ಲದೇ ಸಮಿತಿಯಲ್ಲಿ ಇತರ ಸದಸ್ಯರನ್ನು ಸಹ ಸೇರಿಸಿಕೊಳ್ಳಲಾಗಿದೆ.

ಆಯ್ಕೆ ಮಾಡಿದಂತಹ ಎಲ್ಲಾ ಸವಿತಾ ಸಮಾಜದ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ನೂತನವಾಗಿ ರಚನೆಯಾಗಿರುವ ಯುವ ಘಟಕ ಸಲ್ಲಿಸಿದೆ.


ಪ್ರದೀಪ್ ಭಂಡಾರಿಯವರು ಸಾಗರ ಜೆ ಪಿ ನಗರದ ಶ್ರೀಮತಿ ಜಯಂತಿ ಭಂಡಾರಿ ಮತ್ತು ಶ್ರೀ ಕೃಷ್ಣಮೂರ್ತಿ ಭಂಡಾರಿಯವರ ಮಗ , ಕೃಷಮೂರ್ತಿ ಭಂಡಾರಿಯವರು ಭಂಡಾರಿ ಸಮಾಜ ಸಂಘ ಸಾಗರ ಘಟಕದ ಅಧ್ಯಕ್ಷರಾಗಿದ್ದಾರೆ.
ಪ್ರದೀಪ್ ಭಂಡಾರಿ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯರಾಗಿದ್ದಾರೆ.


ಪ್ರದೀಪ್ ಭಂಡಾರಿಯವರು ತನ್ನ ಅಧಿಕಾರದ ಅವಧಿಯಲ್ಲಿ ಸಮಾಜಮುಖಿ ಕೆಲಸವನ್ನು ಮಾಡಲಿ , ಸಮಾಜದ ಯುವಕರಿಗೆ ಅವರು ದಾರಿದೀಪವಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.

Leave a Reply

Your email address will not be published. Required fields are marked *