January 18, 2025
9fd0ee2a-b4c4-47a4-a45e-99133c92e95e

ಪ್ರಜ್ಞಾ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ

ಶಿವಮೊಗ್ಗ ಡಿವಿಎಸ್‌ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜ.7ರಂದು ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ತುಳು ಭಾಷಣ ಸ್ಪರ್ಧೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಅಂಗ್ಲಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಪ್ರಜ್ಞಾ ಪ್ರಥಮ ಸ್ಥಾನ ಪಡೆದು ಶಾಲೆಗೆ ನಮ್ಮ ಸಮಾಜಕ್ಕೆ ಒಳ್ಳೆಯ ಹೆಸರನ್ನು ಗಳಿಸಿ ಕೊಟ್ಟಿದ್ದಾರೆ.

ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಹಾಗೂ ಶಾಲಾ ಶಿಕ್ಷಕರು ಮಾರ್ಗದರ್ಶನ ನೀಡಿದ್ದರು. ಇವರು ಪುತ್ತೂರು ಅಲಂಕಾರು ನಿವಾಸಿ ಚಿದಾನಂದ ಭಂಡಾರಿ ಮತ್ತು ಆಶಾಲತ ದಂಪತಿಗಳ ಮಗಳು.

ಇವರು ಮುಂದೆ ಕೂಡ ಇನ್ನೂ ಹೆಚ್ಚಿನ ಸಾಧನೆ ಮಾಡಿ ಯಶಸ್ಸನ್ನು ಪಡೆಯಲಿ ಎಂದು ಭಂಡಾರಿ ವಾರ್ತೆ ಯು ಈ ಮೂಲಕ ಹಾರೈಸುತ್ತದೆ.

ವರದಿ-ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *