
ಆಧುನಿಕ ಯುಗದಲ್ಲಿ ಆಕೆ ತನ್ನನ್ನು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಮನೆಯೊಳಗಿನ ಮತ್ತು ಹೊರಗಿನ ಕೆಲಸಗಳನ್ನು ಸಮಾನವಾಗಿ ನಿಭಾಯಿಸುತ್ತಿದ್ದಾರೆ. ಪ್ರಕೃತಿ ಯ ವಿಶೇಷ ಸೃಷ್ಟಿಯೇ ಮಹಿಳೆ. ಇದಕ್ಕೆಲ್ಲಾ ಕಾರಣವಾಗಿರುವುದು ಸ್ತ್ರೀ ಯಲ್ಲಿರುವ ಮನೋಬಲ

ಮಾಚ್೯ 8 ರಂದು ಮಹಿಳಾ ದಿನ. ಅವತ್ತಿನ ದಿನವಂತು ಎಲ್ಲರ ವಾಟ್ಸಪ್ ಸ್ಟೇಟಸ್ ನಲ್ಲೂ ಬಹಳ ಗೌರವ ಮಹಿಳೆಯರಿಗೆ. ಆದರೆ ಇದು ಒಂದು ದಿನಕ್ಕೆ ಮಾತ್ರ ಸೀಮಿತಾನಾ ??. ನಂತರ ಇದ್ದದೆ ಬಿಡಿ ಸ್ತ್ರೀ ಯ ಮೇಲಿನ ಶೋಷಣೆಗಳ ಪಟ್ಟಿ. ಆದರೆ ಇಂದು ಒಂದು ಮನೆಯ ಪೂರ್ಣ ಜವಾಬ್ದಾರಿ ತೆಗೆದುಕೊಂಡು ಮುನ್ನಡೆಸುವ ಶಕ್ತಿ ಆಕೆಗಿದೆ.

ಏನನ್ನೂ ಹೇಳದೆ ಎಲ್ಲಾ ಕೆಲಸವನ್ನು ಮಾಡುವ ಆಕೆಗೂ ಬಿಡುವು ಬೇಕಾಗಿದೆ. ಮೂರು ದಿನದ ಜೀವನದಲ್ಲಿ ಗಂಡು ಹೆಣ್ಣು ಸಮಾನತೆಯಿಂದ ಇದ್ದರೆ ಬಾಳು ಸುಗಮ. ಅಂತಹ ಕೆಲವು ಜನಗಳು ನಮ್ಮ ನಡುವೆ ಇದ್ದಾರೆ ಎಂಬುದು ಖುಷಿಯೇ ಸರಿ. ಮದುವೆ ನಂತರವೂ ಕೆಲವು ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಗುರಿ ತಲುಪಿದ್ದಾರೆ ಎಂದರೆ ಅದರಲ್ಲಿ ಗಂಡನ ಪ್ರೋತ್ಸಾಹವು
“ತನ್ನ ಕೆಲಸ ಕಾರ್ಯ,ತನ್ನ ಗೌರವವನ್ನು ಕಾಪಾಡಿಕೊಳ್ಳಲು ಹೆಣ್ಣು ಯಾವಾಗಲೂ ಮುಂದಾಗಬೇಕು. ಹೇಗೆ ಮಹಿಳೆ ಗೌರವ ನೀಡುತ್ತಾಳೋ ಹಾಗೆಯೇ ಅವಳಿಗೂ ಗೌರವ ನೀಡುವ ಪದ್ಧತಿ ಹೆಚ್ಚಾಗಬೇಕಿದೆ… “

✍ಗ್ರೀಷ್ಮಾ ಕಲ್ಲಡ್ಕ