
ಉಡುಪಿ ಪಾರಂಪಳ್ಳಿಯ ಶ್ರೀ ವಿಠಲ್ ಭಂಡಾರಿ ಮತ್ತು ಶ್ರೀಮತಿ ಪ್ರೇಮಾ ವಿಠಲ್ ಭಂಡಾರಿ ದಂಪತಿಗಳ ಪುತ್ರ
ಚಿ॥ ಪ್ರಸಾದ್
ಹಾಗೂ ಉಡುಪಿ ಮುದರಗಂಡಿ ವಿದ್ಯಾನಗರದ ಇಂದಿರಾ ಆರ್.ಭಂಡಾರಿ ಮತ್ತು ದಿವಂಗತ ರವೀಂದ್ರ ಭಂಡಾರಿ ಯವರ ಪುತ್ರಿ
ಚಿ॥ ಸೌ॥ಅರ್ಚನಾ
ಇವರ ವಿವಾಹವು ಏಪ್ರಿಲ್ 9 ರ ಸೋಮವಾರ ಉಡುಪಿಯ ಕನ್ನಪಾ೯ಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಬಹಳ ವಿಜೃಂಭಣೆ ಯಿಂದ ನೆರವೇರಿತು.

ಈ ಶುಭ ಸಮಾರಂಭಕ್ಕೆ ಬಂಧು ಮಿತ್ರರು,ಸಮಾಜ ಬಾಂಧವರು,ಟಿವಿ ಧಾರಾವಾಹಿ ನಟ ನಟಿಯರು,ಅಭಿಮಾನಿಗಳು,ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಇವರ ದಾಂಪತ್ಯ ಜೀವನವು ಯಶಸ್ವಿಯಾಗಲಿ,ನವದಂಪತಿಗಳಿಗೆ ಭಗವಂತನು ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಮದುವೆಯ ಶುಭಾಶಯಗಳನ್ನು ಕೋರುತ್ತದೆ.
ವರದಿ: ಪವಿತ್ರ ಭಂಡಾರಿ ಉಡುಪಿ