January 18, 2025
mbd_oct9_1-Prasad-Kumar

ಮೂಡುಬಿದಿರೆ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದಿದ್ದು, ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪ್ರಸಾದ್ ಕುಮಾರ್ ಕೆ. ಎನ್ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಮೀಸಲಾತಿಯನ್ನು ಪಡೆದಿರುವ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್-14 ಮಾಸ್ತಿಕಟ್ಟೆಯ ಪ್ರಸಾದ್ ಕುಮಾರ್ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಮೂರನೇ ಬಾರಿಗೆ ಸತತವಾಗಿ ಸದಸ್ಯರಾಗಿರುವ ಪ್ರಸಾದ್ ಕುಮಾರ್ ಸಧ್ಯ ಪುರಸಭೆಯಲ್ಲಿರುವ ಬಿಜೆಪಿಯ ಹಿರಿಯ ಸದಸ್ಯರಾಗಿದ್ದಾರೆ.

ಇವರು ಮೂಡಬಿದಿರೆ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಪ್ರಕಾಶ್ ಭಂಡಾರಿ ಕೆ. ಎನ್ ರವರ ಸಹೋದರ.

ಭಂಡಾರಿ ವಾರ್ತೆ.

1 thought on “ಮೂಡುಬಿದಿರೆ ಪುರಸಭೆ ಅಧ್ಯಕ್ಷರಾಗಿ ಪ್ರಸಾದ್ ಕುಮಾರ್ ಕೆ. ಎನ್ ಆಯ್ಕೆ

Leave a Reply

Your email address will not be published. Required fields are marked *