
ಕಾಸರಗೋಡು ನೆಲ್ಲಿಕುಂಜದ ದಿವಂಗತ ತುಕಾರಾಮ್ ಭಂಡಾರಿ ಮತ್ತು ಶ್ರೀಮತಿ ವೀಣಾ ಭಂಡಾರಿ ಯವರ ಪುತ್ರ ಪ್ರಶಾಂತ್ ಭಂಡಾರಿ ತಾರೀಕು 3 ಸೆಪ್ಟೆಂಬರ್ ನ ಮಂಗಳವಾರ ಸಂಜೆ ನಿಧನರಾದರು .ಅವರಿಗೆ ಸುಮಾರು 35 ವರ್ಷ ವಯಸ್ಸಾಗಿತ್ತು.
ಕಾಸರಗೋಡಿನ ಕರಂದಕಾಡು ಎಂಬಲ್ಲಿ ಸ್ವಂತ ಹೋಟೆಲ್ ಮತ್ತು ಡೆಕೋರೇಷನ್ ಕೆಲಸ ಮಾಡಿಕೊಂಡಿದ್ದ ಪ್ರಶಾಂತ್ ರವರ ತಮ್ಮ ಸಂದೀಪ್ ರನ್ನು ಕಳೆದ ವರ್ಷ ಕಾಸರಗೋಡಿನಲ್ಲಿ ಹತ್ಯೆ ಮಾಡಲಾಗಿತ್ತು ಮತ್ತು ತಂದೆ ತುಕಾರಾಮ್ ಭಂಡಾರಿ ಇತ್ತೀಚೆಗಷ್ಟೇ ನಿಧನರಾಗಿದ್ದರು.
ದಿವಂಗತರು ತಾಯಿ ವೀಣಾ ಮತ್ತು ತಂಗಿ ಸ್ವಪ್ನಾ ರನ್ನು ಅಗಲಿದ್ದಾರೆ. ಮನೆಗೆ ಆಸರೆಯಾಗಿದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದೆ.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ .ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ತುಂಬಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.