
ಪುತ್ತೂರು ತಾಲೂಕಿನ ಚಿಕ್ಕಮುದ್ನೂರು ತಾರಿಗುಡ್ಡೆ ದುರ್ಗಾನಿವಾಸದ ಶ್ರೀ ದಿನೇಶ್ ಭಂಡಾರಿ ಮತ್ತು ಶ್ರೀಮತಿ ಪ್ರಮೀಳಾ ಭಂಡಾರಿಯವರ ಪುತ್ರಿ ಕುಮಾರಿ. ಪ್ರತೀಕ್ಷಾ ಭಂಡಾರಿ ದ್ವಿತೀಯ ಪಿಯುಸಿ ವಾಣಿಜ್ಯವಿಭಾಗದಲ್ಲಿ 550 (91.66%) ಅಂಕಗಳನ್ನು ಪಡೆಯುವುದರೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ತನ್ನ ಗುರು ವೃಂದ, ವಿದ್ಯಾಸಂಸ್ಥೆ , ಹುಟ್ಟೂರು ಮತ್ತು ಪೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ನರೇಂದ್ರ ಪದವಿಪೂರ್ವ ಕಾಲೇಜು ತೆಂಕಿಲ ಪುತ್ತೂರು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿರುತ್ತಾರೆ.

ಇವರ ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಕು. ಪ್ರತೀಕ್ಷಾರವರವರ ಸಾಧನೆಗೆ ಅಭಿನಂದನೆ ಸಲ್ಲಿಸುತ್ತಾ ಇವರ ಮುಂದಿನ ವಿದ್ಯಾಭ್ಯಾಸ ಮತ್ತು ಭವಿಷ್ಯ ಉಜ್ವಲವಾಗಿರಲಿ ದೇವರ ಆಶೀರ್ವಾದ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
ಭಂಡಾರಿ ವಾರ್ತೆ