December 3, 2024
5

Pregnancy Facts: ಗರ್ಭಾವಸ್ಥೆಯ ಬಗ್ಗೆ ಯಾವುದನ್ನು ನಂಬಬೇಕು, ಯಾವ ವಿಷಯಗಳನ್ನು ಕಡೆಗಣಿಸಬೇಕು?

Pregnancy tips: ಗರ್ಭಿಣಿಯಾಗುವುದು ಪ್ರತಿಯೊಬ್ಬ ಹೆಣ್ಣಿಗೂ ವಿಶೇಷವಾದ ಅನುಭವ. 9 ತಿಂಗಳ ಈ ಪಯಣದಲ್ಲಿ ಅನೇಕ ಭಯಗಳು ತಾಯಿ ಆಗುವವಳನ್ನು ಕಾಡುತ್ತವೆ. ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಗರ್ಭಾವಸ್ಥೆಯಲ್ಲಿ ಮಹಿಳೆಯ ಮನಸ್ಸು ಶಾಂತವಾಗಿರಬೇಕು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ, ದೇಹದಲ್ಲಿನ ವಿವಿಧ ಹಾರ್ಮೋನ್ ಬದಲಾವಣೆಗಳಿಂದಾಗಿ ಮನಸ್ಥಿತಿ ಶಾಂತವಾಗಿರುವುದಿಲ್ಲ. ಇದಕ್ಕೆ ಮೂಡ್ ಸ್ವಿಂಗ್ಸ್ ಎನ್ನುತ್ತಾರೆ.

ವಿನಾಕಾರಣ ದುಃಖವಾಗುತ್ತೆ, ಅಳು ಬರುತ್ತೆ. ಇದು ಒಂದು ರೀತಿಯ ಭಯ ಹುಟ್ಟಿಸಬಹುದು. ಗರ್ಭಿಣಿಯರ ಕೆಲವು ಭಯಗಳು ಸತ್ಯವಾಗಿದ್ದರೆ, ಕೆಲವು ಅನಗತ್ಯ ಆತಂಕಗಳು. ಈ ಬಗ್ಗೆ ನಿಖರ ಮಾಹಿತಿ ಇಲ್ಲಿದೆ.

ಆಹಾರ ಸೇವನೆ ಬಗ್ಗೆ ಗೊಂದಲ: ಸಾಮಾನ್ಯವಾಗಿ, ಅನೇಕ ಗರ್ಭಿಣಿಯರು ಭ್ರೂಣದ ಮೇಲೆ ಪರಿಣಾಮ ಬೀರುವ ಆಹಾರಗಳ ಬಗ್ಗೆ ಹೆಚ್ಚಾಗಿ ಚಿಂತಿಸುತ್ತಾರೆ. ಇದೇ ನಿಜವಾದ ಭಯ. ನಾವು ತಿನ್ನುವ ಆಹಾರವು ನಮ್ಮ ಹುಟ್ಟಲಿರುವ ಮಗುವಿಗೆ ನೇರವಾಗಿ ಹೋಗುತ್ತದೆ. ಹಾಗಾಗಿ ಪೌಷ್ಟಿಕ ಆಹಾರವನ್ನೇ ಸೇವಿಸಿ.

ಆಲ್ಕೋಹಾಲ್, ಗ್ರೀನ್ ಟೀ, ಸಂಸ್ಕರಿಸಿದ ಮಾಂಸ, ಹಾಲು ಮತ್ತು ಚೀಸ್ ಅನ್ನು ತಪ್ಪಿಸಿ. ಇವುಗಳನ್ನು ಅತಿಯಾಗಿ ತಿನ್ನುವುದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.

ಅವಧಿಪೂರ್ವ ಹೆರಿಗೆ: ಧೂಮಪಾನ ಮಾಡುವವರು ಅಥವಾ ಸೋಂಕು ಇರುವವರು ಅಕಾಲಿಕ ಶಿಶುಗಳನ್ನು ಹೊಂದುವ ಸಾಧ್ಯತೆ ಹೆಚ್ಚು. ಒಂದಕ್ಕಿಂತ ಹೆಚ್ಚು ಭ್ರೂಣಗಳು ಬೆಳವಣಿಗೆಯಾದಾಗ ಇದು ಹೆಚ್ಚಾಗಿ ಸಂಭವಿಸುತ್ತದೆ. ಕೆಲವರಿಗೆ ಹೆರಿಗೆ ದಿನಾಂಕದ ನಂತರವೂ ಮಗು ಗರ್ಭದಲ್ಲಿಯೇ ಇರುತ್ತದೆ. ಈ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.

ನಿದ್ರೆ: ಗರ್ಭಿಣಿಯರು ತಮ್ಮ ಹುಟ್ಟಲಿರುವ ಮಗುವಿಗೆ ಹಾನಿಯಾಗಬಹುದು ಎಂಬ ಭಯದಿಂದ ನಿದ್ರೆಯ ಭಂಗಿ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಹೊಟ್ಟೆ ಮೇಲೆ ಮಲಗಲು ಸಾಧ್ಯವಾಗುವುದಿಲ್ಲ, ಆದರಿಂದ ಬೇರೆ ಭಂಗಿಗಳು ಮಗುವಿಗೆ ಹಾನಿ ಮಾಡುವುದಿಲ್ಲ. ಸಾಮಾನ್ಯವಾಗಿ ಮಲಗುವಾಗ ಆರಾಮವಾಗಿರಬೇಕು. ಹೀಗೆ ಮಾಡುವುದರಿಂದ ಅಂತಹ ಯೋಚನೆಗಳು ಬರುವುದಿಲ್ಲ.

ಗರ್ಭಪಾತ: ಅನೇಕ ಗರ್ಭಿಣಿಯರು ಗರ್ಭಪಾತಕ್ಕೆ ಹೆದರುತ್ತಾರೆ. ಸಾಮಾನ್ಯವಾಗಿ ಮಗುವನ್ನು ಸುರಕ್ಷಿತವಾಗಿರಿಸಲು ಮೊದಲ 3 ತಿಂಗಳುಗಳು ಅವಶ್ಯಕ. ಈ ಅವಧಿಯಲ್ಲಿ ಗರ್ಭಪಾತ ಸಂಭವಿಸುತ್ತದೆ. ಅದರ ನಂತರ ಮತ್ತೆ ಮತ್ತೆ ಗರ್ಭಪಾತವಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಒಮ್ಮೆ ಗರ್ಭಪಾತವಾದ ಬಳಿಕ ಮತ್ತೆ ಅದೇ ರೀತಿ ಆಗಬೇಕು ಅಂತೇನು ಇಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬೇಡಿ. ನೀವು ತುಂಬಾ ಹೆದರುತ್ತಿದ್ದರೆ, ನಿಮ್ಮ ಪ್ರೀತಿಪಾತ್ರರ ಜೊತೆ ಮಾತನಾಡಿ. ಹೀಗೆ ಮಾಡುವುದರಿಂದ ನೀವು ಮಾನಸಿಕವಾಗಿ ನಿರಾಳರಾಗುತ್ತೀರಿ.

ಮೇಲಿನ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.  ಯಾವುದೇ ಸಲಹೆಯನ್ನು ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: 18

Leave a Reply

Your email address will not be published. Required fields are marked *