
ಬಂಟ್ವಾಳ ಎಸ್ .ವಿ. ಎಸ್ .ಕಾಲೇಜಿನಲ್ಲಿ ಕಳೆದ 29 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ನಾರಾಯಣ್ ಭಂಡಾರಿ ಜುಲೈ 31 ರಂದು ಸೇವೆಯಿಂದ ನಿವೃತ್ತಿಯಾದರು.


ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘ (ಆಮುಕ್ತ್) ದ ವತಿಯಿಂದ ಮಂಗಳೂರಿನ ಎಸ್ .ಡಿ.ಎಮ್ . ಕಾನೂನು ಕಾಲೇಜಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆದಿತ್ಯವಾರ ದಂದು ಪ್ರೊ ॥ ನಾರಾಯಣ್ ಭಂಡಾರಿ ಯವರನ್ನು ಸನ್ಮಾನಿಸಲಾಯಿತು ವೇದಿಕೆಯಲ್ಲಿ ಆಮುಕ್ತ್ ಅಧ್ಯಕ್ಷ ಪ್ರೊ॥ ಜೋಸೆಫ್ ಎಮ್ .ಎನ್. , ಪ್ರಧಾನ ಕಾರ್ಯದರ್ಶಿ ಡಾ॥ ವಿಶಾಲ ಬಿ.ಕೆ., ಖಜಾಂಚಿ ಗೋಪಾಲ ಗೋಖಲೆ, ಮೂಡಬಿದ್ರೆ ಮಹಾವೀರ ಕಾಲೇಜಿನ ಉಪನ್ಯಾಸಕ ಪ್ರವೀಣ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿವೃತ್ತಿ ಜೀವನವು ಸುಖ ಶಾಂತಿ ನೆಮ್ಮದಿಯ ಬದುಕನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನೆಯ ಮಾತು ಭಂಡಾರಿ ವಾತೆ೯ಯ ಹಾದಿ೯ಕ ಶುಭ ಹಾರೈಕೆಗಳು.
— ಭಂಡಾರಿ ವಾತೆ೯