January 18, 2025
Neha

ಕಾಸರಗೋಡು ಉರ್ದೂರಿನ ಅಡೂರು ಮನೆಯ ಶ್ರೀ ಭಾಸ್ಕರ ಭಂಡಾರಿ ಮತ್ತು ಶ್ರೀಮತಿ ಸುಚೇತಾ ದಂಪತಿಗಳ ಪುತ್ರಿ ಕು. ನೇಹಾ ಇವರು ಈ ವರ್ಷದ  ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 518 ( 86.33%) ಅಂಕ ಗಳಿಸುವುದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರ ಈ ಸಾಧನೆಯ ಮೂಲಕ ತನ್ನ ವಿದ್ಯಾಸಂಸ್ಥೆ, ಊರು ಮತ್ತು ಪೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು  ಸುಳ್ಯದ ನೆಹರೂ ಮೆಮೋರಿಯಲ್ ಪಿ ಯು ಕಾಲೇಜಿನ ವಿದ್ಯಾರ್ಥಿನಿಯಾಗಿರುತ್ತಾರೆ. 

ಕು. ನೇಹಾ ಳ ಸಾಧನೆಯು ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು, ಇವರ ಈ ಸಾಧನೆಯನ್ನು ಶ್ಲಾಘಿಸುತ್ತಾ ಇವರ ಮುಂದಿನ ಶಿಕ್ಷಣ ಮತ್ತು ಭವಿಷ್ಯ ಅತ್ಯುತ್ತಮವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ. 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *