
ಕೇರಳ ,ಕಾಸರಗೋಡು ಜಿಲ್ಲೆ ಚೆರಲ್ ನ ವಸಂತ ಮಹಲ್ ನಿವಾಸದ ಶ್ರೀ ವಸಂತ ಕುಮಾರ್ ಕೆ ಮತ್ತು ಶ್ರೀಮತಿ ಸುಧಾ ಕೆ ದಂಪತಿಗಳ ಪುತ್ರ ವಂದಿಪ್ ಚೆರಲ್ ಪಿಯುಸಿ ಕಲಾವಿಭಾಗದ ಪರೀಕ್ಷೆಯಲ್ಲಿ 490(81.66%) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರು ವಿವೇಕಾನಂದ ಪದವಿ ಪೂರ್ವ ಕಾಲೇಜು ನೆಹರೂ ನಗರ ಪುತ್ತೂರಿನ ವಿದ್ಯಾರ್ಥಿಯಾಗಿರುತ್ತಾರೆ.
ಇವರ ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು , ಈ ಸಂದರ್ಭದಲ್ಲಿ ವಂದಿಪ್ ರವರ ಸಾಧನೆಯನ್ನು ಅಭಿನಂದಿಸುತ್ತಾ, ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ‘ಭಂಡಾರಿ ವಾರ್ತೆ’ ಭಗವಂತನಲ್ಲಿ ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ