December 3, 2024
cat_kisses.jpg.653x0_q80_crop-smart
ತುಲು ಭಾಷೆಯಲ್ಲಿ” ಪುಚ್ಚೆ “ ಎಂದರೆ ಏನು ಎಂಬ ಪ್ರಶ್ನೆಗೆ ತಟ್ಟನೆ ಎರಡು ಉತ್ತರಗಳು ಸಿಗುತ್ತವೆ. ಅವುಗಳು ‘ ಬೆಕ್ಕು ‘ (CAT) ಮತ್ತು’ಜಡೆ’(PLAIT) ಎಂಬುವುದು ಆಗಿರುತ್ತದೆ. ಇತರ ಭಾಷೆಗಳಲ್ಲಿ ಇವೆರಡು ಶಭ್ದಗಳಿಗೆ ಬೇರೆ ಬೇರೆ ಪದಗಳೇ ಸಿಗುತ್ತದೆ. ಇದೇಕೆ ಎರಡು ಪದಗಳಿಗೆ ಒಂದೇ ಪದದ ಅರ್ಥ ಎಂಬುದನ್ನು ಆಳದ ಚಿಂತನೆಗೆ ಒಳ ಪಡಿಸಿದರೆ ಅರ್ಥ ಪೂರ್ಣ ಉತ್ತರ ಸಿಗುತ್ತದೆ. ಬೇರೆ ಭಾಷೆಗಳಂತಲ್ಲ ತುಲು ಭಾಷೆ. ತುಲು ಭಾಷೆಯ ಪ್ರತಿ ಪದದಲ್ಲೂ ಸುಲಭದಲ್ಲಿ ಬಿಡಿಸಲಾಗದ ಅರ್ಥಗಳು ಅಡಗಿರುತ್ತದೆ. ತಮಿಲರು”ತುಲು” ಭಾಷೆಗೆ ಬಹಳಷ್ಟು ಗೌರವ ಕೊಡುತ್ತಾರೆ. ಏಕೆಂದರೆ ತಮಿಲು ಭಾಷೆ ಹುಟ್ಟಿರುವುದು ತುಲು ಭಾಷೆಯಿಂದ ಎಂದು ಅವರು ಹ್ರದಯ ಬಿಚ್ಚಿ ಹೇಳುವರು. ಆದರೆ ತುಲು ಲಿಪಿಗಳನ್ನು ನಕಲುಮಾಡಿ ಅದು ನಮ್ಮದೇ ಲಿಪಿ ಎಂದು ಹೇಳುವ ಮಲಯಾಲಿಗಳಿಗೆ ಏನನ್ನೂ ಹೇಳಲು ಆಗುವುದಿಲ್ಲ. ಕಾಲ ಮಿಂಚಿ ಹೋಗಿದೆ.
        ” ಪುಚ್ಚೆ” ಎಂಬ ಪದದಿಂದ ಬೆಕ್ಕನ್ನು ಆದಿ ಮೂಲದಿಂದ ಇಲ್ಲಿ ಕರೆಯುತ್ತಿದ್ದರು. ಆ ಕಾಲದಲ್ಲಿ ಜಡೆ ನೆಯ್ದು ಹಾಕುವವರೆಗೆ ನಾಗರಿಕತೆ ಬೆಳೆದಿರಲಿಲ್ಲ. ಕಾಡಿನಂತೆ ತಲೆಗೂದಲು ಬೆಳೆಯುತ್ತಿತ್ತು. ನಂತರದಲ್ಲಿ ನಾಗರಿಕತೆ ಬೆಳೆದಂತೆ ಜನರು ಸ್ವಚ್ಛತೆಗೆ ಗಮನ ಕೊಟ್ಟರು. ಚಂದ ಕಾಣಲು ಬೆಳೆದ ತಲೆಗೂದಲನ್ನು ಕತ್ತರಿಸಿದರು. ಚೆನ್ನಾಗಿ ಬಾಚಿ ಜಡೆ ನೆಯ್ದರು.ಜಡೆ ಕಟ್ಟಿದರು.
       ಹಣೆಯಿಂದ ಜಡೆಯ ಕೊನೆಯವರೆಗಿನ ಕೂದಲಿನ ಸ್ಪರ್ಶ ಅವರಿಗೆ ತಮ್ಮ ಪ್ರೀತಿಯ ಕೊಂಡಾಟದ ಸಾಕು ಪ್ರಾಣಿಯಾದ ಬೆಕ್ಕಿನ ಸ್ಪರ್ಶದಂತೆ ಭಾಸವಾಯಿತು. ಬೆಕ್ಕಿನ ಬಾಲದಂತೆ ಜಡೆಯು ಕಂಡಿತ್ತು.“ಪುಚ್ಚೆ”ಎಂದು ಕರೆದರು. ಆ ಪದವೇ ತುಲುವರ ತುಲು ಭಾಷೆಯಲ್ಲಿ ಶಾಶ್ವತ ಆಯಿತು.
        ಇಲ್ಲಿ ಬೆಕ್ಕು=ಜಡೆ. ಜಡೆ=ಬೆಕ್ಕು ಎಂದಾಯಿತು. ಏಕೆಂದರೆ ಬೆಕ್ಕಿನ ತಲೆಯಿಂದ ಬಾಲದ ಕೊನೆಯವರೆಗೆ ಮತ್ತು ಅದೇ ರೀತಿ ಹಣೆಯಿಂದ ಜಡೆ(ಕೇಶ ರಾಶಿ)ಯ ಕೊನೆಯವರೆಗೆ ಸ್ಪರ್ಶಿಸಿ ಸವರಿದಾಗ ಸಿಗುವ ಸ್ಪರ್ಶದ ಭಾವನೆಗಳು ಒಂದೇ ಆಗಿರುತ್ತದೆ. ಅಂದಿನ ಮಾನವನಿಗೆ ಹಣೆಯಿಂದ ಜಡೆಯ ಕೊನೆಯವರೆಗಿನ ಕೂದಲಿನ ಸ್ಪರ್ಶ ಅವರಿಗೆ ತಮ್ಮ ಪ್ರೀತಿಯ ಸಾಕು ಪ್ರಾಣಿಯಾದ ಬೆಕ್ಕಿನ ಸ್ಪರ್ಶದಂತೆ ಭಾಸವಾಯಿತು. ಬೆಕ್ಕಿನ ಬಾಲದಂತೆ ಜಡೆಯು ಕಂಡಿತು.“ಪುಚ್ಚೆ”ಎಂದರು. ಆ ಪದವೇ ತುಲು ಭಾಷೆಯಲ್ಲಿ ಶಾಶ್ವತವಾಗಿ ಉಳಿಯಿತು. ಈಗಲೂ ಕೆಲವರ ಜಡೆಗೆ “ಪುಚ್ಚೆದ ಬೀಲ”(ಬೆಕ್ಕು ಬಾಲ)ಎನ್ನುವರು.
          ಶಾಂತವಾದ, ಸೌಮ್ಯವಾದ, ಸ್ನಿಗ್ಧ ವಾದ, ಸುಲಭವಾದ, ನಯವಾದ, ಸರಳವಾದ, ಕೋಮಲವಾದ, ನುಣುಪಾದ, ಮೆದುವಾದ, ಆರ್ದ್ರ ವಾದ, ಮೆತ್ತಗೆಯ, ಕಟುವಲ್ಲದ, ಸೂಕ್ಷ್ಮ ವಾದ, ತೀಕ್ಷ್ಣವಲ್ಲದ, ಸಹಾನುಭೂತಿಯುಳ್ಳ , ಒರಟಿಲ್ಲದ, ದಯೆಯುಳ್ಳ, ಗಡುಸಾಗಿರದ, ಮೆತ್ತಗೆಯ, ಅನುಕಂಪದ, ಮೃದುವಾದ , ಹಿತವಾದ, ನಯವಾದ, ಮುದಕೊಡುವ, ಪ್ರೀತಿಯ, ಅನ್ಯೋನ್ಯತೆಯ, ಹಗುರವಾದ, ಸಾಧು ಸ್ವಭಾವದ ಭಾವನೆಗಳು ಬೆಕ್ಕಿನ ಹಣೆಯಿಂದ ಅದರ ಬಾಲದ ಕೊನೆಯವರೆಗೆ ಸವರಿದಾಗ ಸಿಗುತ್ತದೆ. ಇದೇ ತರಹದ ಭಾವನೆಗಳು ಹೆಣ್ಣಿನ ಹಣೆಯಿಂದ ಜಡೆಯ ಕೊನೆಯವರೆಗೆ ಸವರಿದಾಗ ಸಿಗುತ್ತದೆ.
       ಬೆಕ್ಕುಗಳಷ್ಟು ಸ್ವಚ್ಛತೆಯ ಪ್ರಾಣಿ ಇಡೀ ಪ್ರಪಂಚದಲ್ಲೇ ಬೇರೊಂದಿಲ್ಲ. ಈ ಕಾರಣದಿಂದಲೇ ಬೆಕ್ಕುಗಳನ್ನು ಮನೆಗಳ ಒಳಗೆ ಸಾಕುತ್ತೇವೆ. ಅದೇ ರೀತಿ ಮಾನವನ ಅಂಗಾಂಗಳಲ್ಲಿ ತಲೆಯ ಕೇಶ ರಾಶಿಯ ಜಡೆಯಷ್ಟು ಸ್ವಚ್ಛತೆಯ ಭಾಗ ಇನ್ನೊಂದು ಇಲ್ಲ. ಸ್ವಚ್ಛತೆಯ ಮ್ರದುವಾದ ಜಡೆಗೆ ಮ್ರದುವಾದ ಸುಗಂಧಭರಿತ ಹೂವುಗಳನ್ನು ಮುಡಿಯುವ ಸಂಪ್ರದಾಯ ತುಲುವರಿಂದಲೇ ಹುಟ್ಟಿಕೊಂಡಿದೆ.ಪೂ ಕಟ್ಟುನು,ಪುಚ್ಚೆ ಕಟ್ಟುನು ಎಂದು ಕರೆದರು. ಅದೇ ರೀತಿ ಪೂ ನೆಯಿಪುನು, ಪುಚ್ಚೆ ನೆಯಿಪುನು ಎಂದಾಯಿತು. ಬೆಕ್ಕು ಮತ್ತು ಜಡೆಯ ಒಂದೇ ಸಮಾನತೆಯ ಹೋಲಿಕೆಗಳಿಂದಲೇ ” ಪುಚ್ಚೆ” ಎಂಬ ಪದ ಹುಟ್ಟಿತ್ತು.
By Irvathur Govinda Bhandary, Karkala.

Leave a Reply

Your email address will not be published. Required fields are marked *