January 18, 2025
porana-2

                                                ಪೀಠಿಕೆ

          ಜೀವನವೆಂಬುದು ಧರ್ಮದ ಸೇತುವೆಯಲ್ಲಿರಬೇಕು, ಧರ್ಮದ ಹಾದಿ ಬಿಟ್ಟು ಅಧರ್ಮದ ಪಥವನ್ನು ಯಾರು ಹಿಡಿಯುತ್ತಾರೋ ಅವರು ತನ್ನ ಜೀವನದ ಲಾಭಾಂಶವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲ. ಒಂದಲ್ಲ ಒಂದು ಸಮಸ್ಯೆಯನ್ನು , ಕೊರತೆಯನ್ನು ಅನುಭವಿಸಲೇ ಬೇಕು. ಪುರಾಣಗಳು ನಮ್ಮ ಜೀವನದ ಮೌಲ್ಯಗಳನ್ನುಅರಿಯಲು ರಚನೆಯಾಗಿದೆ. ಧರ್ಮ, ಅಧರ್ಮದ ನಡುವಿನ ವ್ಯತ್ಯಾಸ ತಿಳಿಯಲು ಹಾಗೂ ನಾವು ಸಜ್ಜನರಾಗಿ ಬಾಳಲು ಈ ಪುರಾಣ ಕಥೆಗಳು ಸಹಕಾರಿಯಾಗಿದೆ.

          ಪುರಾಣ ಕಥೆಗಳಲ್ಲಿ ಇರುವ ನೀತಿಯ ಸಾರಾಂಶ, ಅದರಲ್ಲಿ ನಾವು ಕಲಿಯಬಹುದಾದ ಪಾಠವನ್ನು ಈ “ಪುರಾಣ ನೀತಿ” ಎಂಬ ಸಂಚಿಕೆಯ ಮೂಲಕ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಪ್ರತಿಯೊಂದು ಕಥೆಯಲ್ಲೂ ಒಂದೊಂದು ನೀತಿ ಇದ್ದು, ನಿಮ್ಮ ಜೀವನಕ್ಕೆ ಹತ್ತಿರವಾದ ಪಾತ್ರಗಳನ್ನು ಇಲ್ಲಿ ಕಾಣಬಹುದು.

          ಪ್ರತಿ ಪುರಾಣದ ಕಥೆಯಲ್ಲೂ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ಪ್ರತಿಯೊಂದು ಪಾತ್ರವೂ ಧರ್ಮ ಅಧರ್ಮದ ಪಾಠವನ್ನು ನಮಗೆ ತಿಳಿಸುತ್ತದೆ. ಈ ಮೂಲಕ ಧರ್ಮ, ಅಧರ್ಮದ ದಾರಿ ಹೇಗಿರುತ್ತದೆ. ಎಂದು ತಿಳಿಸುವ ಚಿಕ್ಕ ಪ್ರಯತ್ನ ನಮ್ಮದಾಗಿರುತ್ತದೆ.

✍🏻 ಎಸ್. ಕೆ. ಬಂಗಾಡಿ

 

Leave a Reply

Your email address will not be published. Required fields are marked *