ಬಜೆಗೋಳಿಯ ದಿವಂಗತ ಗೋಪಾಲ ಭಂಡಾರಿಯವರ ಪುತ್ರ ಶ್ರೀ ಪುರಂದರ ಭಂಡಾರಿಯವರು ಮುಂಬಯಿಯ ಅಂದೇರಿ ವೆಸ್ಟ್, ಅಂಬೋಲಿಯಲ್ಲಿರುವ ತಮ್ಮ ನಿವಾಸದಲ್ಲಿ ಜನವರಿ 16 ರಂದು ಅನಾರೋಗ್ಯದಿಂದ ಕೊನೆಯುಸಿರೆಳೆದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಲತಿಕಾ ಪುರಂದರ ಭಂಡಾರಿ, ಇಬ್ಬರು ಹೆಣ್ಣು ಮಕ್ಕಳಾದ ಶ್ರೀಮತಿ ಕವಿತಾ ಅಜಯ್ ಮತ್ತು ಕುಮಾರಿ ದರ್ಶನಾ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಭಗವಂತನು ಶ್ರೀ ಪುರಂದರ ಭಂಡಾರಿಯವರ ನಿಧನದಿಂದ ದುಃಖಿತರಾದ ಅವರ ಕುಟುಂಬದವರಿಗೂ,ಅವರ ಬಂಧುವರ್ಗದವರಿಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ.