
ಪುತ್ತೂರು ನಗರ ಸಭೆಗೆ ಅಗಸ್ಟ್ 31 ರಂದು ನಡೆಯುವ ಚುನಾವಣೆಗೆ ಹಾರಾಡಿ ವಾಡ್೯ ನಂಬರ್ 14 ರ ಅಭ್ಯರ್ಥಿಯಾಗಿ ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ ವಾಣಿ ಶ್ರೀಧರ್ ಪುತ್ತೂರು ನಗರಸಭೆಯ ಚುನಾವಣಾಧಿಕಾರಿಗೆ ತನ್ನ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಕಳೆದ 35 ವಷ೯ದಿಂದ ದುಡಿದು ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಮತಿ ವಾಣಿ ಶ್ರೀಧರ್ ಸತತ ನಾಲ್ಕು ಬಾರಿ ಪುತ್ತೂರು ಪುರಸಭೆ ಚುನಾವಣೆಗೆ ಸ್ವಧಿ೯ಸಿ ವಿಜೇತರಾಗಿರುತ್ತಾರೆ. ಪುತ್ತೂರು ಪುರಸಭೆಯನ್ನು ನಗರ ಸಭೆಯನ್ನಾಗಿ ಸಕಾ೯ರ ಕಳೆದ ಸಾಲಿನಲ್ಲಿ ಮೇಲ್ದರ್ಜೆಗೆರಿಸಿದೆ. ಇದೀಗ 5 ನೇ ಭಾರಿಗೆ ಹಾರಾಡಿ ಕ್ಷೇತ್ರದಿಂದ ಪುತ್ತೂರು ನಗರಸಭೆ ಚುನಾವಣೆಗೆ ಆಯ್ಕೆ ಬಯಸಿ ಸ್ವಧಿ೯ಸುತ್ತಿದ್ದಾರೆ. ಪುರಸಭೆ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ನೂತನ ರಸ್ತೆ ನಿಮಾ೯ಣ ನಗರದ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಧಮ೯ಸ್ಥಳ ಸ್ರೀ ಶಕ್ತಿ ಗುಂಪಿನ ಪಡೀಲು ವಾಡಿ೯ನ ಅಧ್ಯಕ್ಷೆಯಾಗಿ, ಪುತ್ತೂರು ಭಂಡಾರಿ ಸಮಾಜ ಸಂಘದ ಸದಸ್ಯೆಯಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಪಡೀಲು ಶ್ರೀಧರ್ ಭಂಡಾರಿಯವರ ಪತ್ನಿ ವಾಣಿ ಶ್ರೀಧರ್ ಐದನೇ ಭಾರಿಗೆ ಪುತ್ತೂರು ಜನತೆಯ ಮೂಲಭೂತ ಸೌಕರ್ಯಕ್ಕೆ ಸ್ವಂದಿಸಿ ಮಾದರಿ ನಗರಸಭೆಯನ್ನಾಗಿ ಮಾಡಬೇಕೆಂಬ ದೃಡ ವಿಶ್ವಾಸದಿಂದ ಚುನಾವಣೆಗೆ ಸ್ವದಿ೯ಸುತ್ತಿದ್ದಾರೆ ವಾಣಿ ಶ್ರೀಧರ್.
ವಾಣಿ ಶ್ರೀಧರ್ ಇವರ ಮೊಬೈಲ್ ಸಂಖ್ಯೆ:9980211943.
-ಭಂಡಾರಿ ವಾರ್ತೆ