January 18, 2025
m rghava

         ಮೂಡಬಿದ್ರೆ ಉಳಿಯ ದಿ॥ ಶ್ರೀ ಚಿಂಗ ಭಂಡಾರಿ ಮತ್ತು ಮಂಗಳೂರು ದಂಬೆ ದಿ॥ ಶ್ರೀಮತಿ ಪೊನ್ನಕ್ಕ ಭಂಡಾರಿ ದಂಪತಿಯ ಪುತ್ರ ಮಂಗಳೂರು ಪಂಪವೆಲ್ ದಂಬೆ ನಿವಾಸಿ ಶ್ರೀ ರಾಘವ ಭಂಡಾರಿ, ಅಕ್ಟೋಬರ್‌ 7, ಆದಿತ್ಯವಾರದಂದು ಮಧ್ಯಾಹ್ನ ಅಲ್ಪಕಾಲದ ಆಸೌಖ್ಯದಿಂದ ದಂಬೆ ಮನೆಯಲ್ಲಿ ನಿಧನರಾದರು.

             ಶ್ರೀ ರಾಘವ ಭಂಡಾರಿಯವರು ಕನಾ೯ಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿ 37 ವಷ೯ಗಳ ಸೇವೆಯಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ , ಪಂಜ , ಕಾಕ೯ಳ, ಮಂಗಳೂರಿನ ಕದ್ರಿ ಪಾರ್ಕ್ , ನವ ಮಂಗಳೂರು ಬಂದರಿನ ಅರಣ್ಯ ವಿಭಾಗದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿವ೯ಹಿಸಿದ್ದಾರೆ. ಪತ್ನಿ ಶ್ರೀಮತಿ ಭವಾನಿ ರಾಘವ ಭಂಡಾರಿ ಪುತ್ರ ಶ್ರೀ ಪ್ರಸಾದ್ ಭಂಡಾರಿ ಮೂವರು ಪುತ್ರಿಯರಾದ ಶ್ರೀಮತಿ ರೇಖಾ , ಶ್ರೀಮತಿ ಲಾವಣ್ಯ ಶೈಲೇಶ್ ಮತ್ತು ಶ್ರೀಮತಿ ಮಂಜುಳ ಅಶೋಕ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರ ವಿಧಿ ವಿಧಾನಗಳು ಸೋಮವಾರ ಬೆಳ್ಳಿಗೆ 10 :00 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ಭಂಡಾರಿ ವಾತೆ೯ಗೆ ತಿಳಿಸಿದ್ದಾರೆ

          ಶ್ರೀ ರಾಘವ ಭಂಡಾರಿಯವರ ನಿಧನದ ದು:ಖವನ್ನು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರಿಗೆ ಅಗಲುವಿಕೆಯ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಪ್ರಾರ್ಥಿಸುತ್ತದೆ

–  ಭಂಡಾರಿ ವಾರ್ತೆ

Leave a Reply

Your email address will not be published. Required fields are marked *