January 18, 2025
WhatsApp Image 2022-05-03 at 10.30.41 AM

ಕುಂದಾಪುರದ ಕೊರ್ಗಿ ಸಂಜೀವ ಭಂಡಾರಿಯವರ ಪುತ್ರ ಉಡುಪಿ ತಾಲೂಕು ಕೊಕ್ಕರ್ಣೆ ಗ್ರಾಮದ ಚಿಗರಿಬೆಟ್ಟುವಿನ ನಿವಾಸಿ ರಾಘವೇಂದ್ರ ಭಂಡಾರಿ ಕೆ ಎಸ್ ಇವರು ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ 2 ರ ಬೆಳಿಗ್ಗೆ 2.30 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು .ಅವರಿಗೆ ಸುಮಾರು 57 ವರ್ಷ ವಯಸ್ಸಾಗಿತ್ತು .

ಕಾರ್ಕಳದ ಬಾರ್ & ರೆಸ್ಟೋರೆಂಟ್ ನಲ್ಲಿ ಸಪ್ಲೈಯರ್ ಆಗಿ ದುಡಿಯುತ್ತಿದ್ದ ರಾಘವೇಂದ್ರ ಭಂಡಾರಿ ಯವರು ಪತ್ನಿ ರಮಣಿ ಹಾಗೂ ಇಬ್ಬರು ಪುತ್ರಿಯರಾದ ಕಿರಣ್ಮಯಿ ಮತ್ತು ವೈಷ್ಣವಿ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ .

ದೊಡ್ಡ ಮಗಳು ಕಿರಣ್ಮಯಿ ಅಂತಿಮ ವರ್ಷದ BE ಮಾಡುತ್ತಿದ್ದು ಎರಡನೆಯ ಮಗಳು ವೈಷ್ಣವಿ ಎರಡನೆಯ ವರ್ಷದ ಬಿ ಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ .

ತನ್ನ ವೃತ್ತಿಯಲ್ಲಿ ಬರುತ್ತಿದ್ದ ಅಲ್ಪ ವರಮಾನದಿಂದ ಕುಟುಂಬವನ್ನು ನೋಡಿಕೊಂಡು, ಇಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿರುವ ರಾಘವೇಂದ್ರರವರಿಗೆ ಮಕ್ಕಳ ವಿದ್ಯಾಭ್ಯಾಸದ ಸಾಲದ ಜೊತೆಗೆ ಇವರ ಚಿಕಿತ್ಸೆಗಾಗಿ ಕೂಡ ಸಾಲ ಮಾಡಿದ್ದು ಇದೀಗ ಕುಟುಂಬ ಅವರ ಅಗಲಿಕೆಯಿಂದ ದಿಕ್ಕು ತೋಚದಂತಿದೆ .

ಈ ಸಂದರ್ಭದಲ್ಲಿ ಕಂಗಾಲಾಗಿರುವ ದಿವಂಗತರ ಧರ್ಮಪತ್ನಿ ಶ್ರೀಮತಿ ರಮಣಿ ಯವರಿಗೆ ಸಮಾಜ ಆತ್ಮ ಸ್ಥೈರ್ಯ ತುಂಬಬೇಕಿದೆ .

ಶ್ರೀಮತಿ ರಮಣಿ ಯವರ ಮೊಬೈಲ್ ಸಂಖ್ಯೆ :9164792702

ಮೃತರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *