
ಮುಂಬಯಿಯ ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ನಳಿನಿ ರಮೇಶ್ ಭಂಡಾರಿ ಅವರ ಪ್ರಥಮ ಪುತ್ರ…
ಚಿ॥ ರಾಹುಲ್.
ಮತ್ತು ಮಂಗಳೂರು ಶಿರ್ತಾಡಿಯ ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ಸವಿತಾ ಚಂದ್ರಶೇಖರ್ ದಂಪತಿಯ ಏಕೈಕ ಪುತ್ರಿ…
ಚಿ॥ಸೌ॥ ಶ್ರೇಯಾ.

ಇವರ ವಿವಾಹ ಮಹೋತ್ಸವವು ಡಿಸೆಂಬರ್ 12,2018 ರ ಬುಧವಾರ ಮೂಡುಬಿದಿರೆಯ ನಿಶ್ಮಿತಾ ಟವರ್ಸ್ ನಲ್ಲಿರುವ “ಪ್ಯಾರಡೈಸ್ ಮಲ್ಟಿಪರ್ಪಸ್ ಹಾಲ್” ನಲ್ಲಿ ಅತಿ ವಿಜೃಂಭಣೆಯಿಂದ ನೆರವೇರಿತು.

ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಧು ಮಿತ್ರರು, ಕುಟುಂಬಸ್ಥರು, ಆತ್ಮೀಯರು, ಹಿತೈಷಿಗಳು ನವ ವಿವಾಹಿತರಿಗೆ ಶುಭ ಹಾರೈಸಿ,ಯಥೋಚಿತ ಸತ್ಕಾರವನ್ನು ಸ್ವೀಕರಿಸಿ,ಆಶೀರ್ವದಿಸಿದರು.
ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ರಾಹುಲ್ ಮತ್ತು ಶ್ರೇಯಾ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿ ವಾರ್ತೆ.”