ನವದೆಹಲಿಯ “ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ” ದವರು ನಡೆಸಿಕೊಟ್ಟ “ಕಾಮನ್ ಪ್ರೊಫೆಸಿಯೆನ್ಸಿ ಟೆಸ್ಟ್-ಜೂನ್ 2018” ರಲ್ಲಿ ಶ್ರೀ ರಕ್ಷಿತ್ ಭಂಡಾರಿಯವರು ಉತ್ತೀರ್ಣರಾಗಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಶ್ರೀ ರಕ್ಷಿತ್ ಭಂಡಾರಿಯವರು ಕಾರ್ಕಳ ತಾಲೂಕಿನ ಬೆಳ್ಮಣ್ಣು ಗ್ರಾಮದ ಶ್ರೀ ರವೀಂದ್ರ ಭಂಡಾರಿ ಮತ್ತು ಶ್ರೀಮತಿ ಹೇಮಾ ರವೀಂದ್ರ ಭಂಡಾರಿ ದಂಪತಿಯ ಪುತ್ರ.
ಶ್ರೀ ರಕ್ಷಿತ್ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಅವರ ಶೈಕ್ಷಣಿಕ ಜೀವನ ಉತ್ತರೋತ್ತರ ಅಭಿವೃದ್ಧಿ ಹೊಂದುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಹಾರೈಸುತ್ತದೆ.
-ಭಂಡಾರಿವಾರ್ತೆ.