January 18, 2025
IMG-20171112-WA0002
          ಮುಂಬಯಿ ಬಂಟ್ಸ್ ಕಾನೂನು ವೇದಿಕೆಯವರು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನ.೪ರಂದು ಕುರ್ಲಾ ಅನೆಕ್ಸ್ ಬಿಲ್ಡಿಂಗ್ ಬಂಟ್ಸ್ ಸಂಘದಲ್ಲಿ ಆಯೋಜಿಸಿದ್ದ ಉಚಿತ ಕಾನೂನು ಸಲಹಾ ಶಿಬಿರದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಮುಂಬಯಿ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ, ಭಂಡಾರಿ ಕುಟುಂಬದ ಹೆಮ್ಮೆಯ ಪುತ್ರ ಶ್ರೀ ರಾಮಣ್ಣ ಭಂಡಾರಿ ಅವರು ವಿಶೇಷ ಸನ್ಮಾನವನ್ನು ಪಡೆದಿದ್ದಾರೆ.
ವೇದಿಕೆಯು ಬಂಟ್ಸ್ ನ್ಯಾಯ ಮಂಡಳಿ, ಬಂಟ್ಸ್ ಸಂಘ,ಬಂಟ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಿದ ಈ ಶಿಬಿರದಲ್ಲಿ ದೇಶದ ಪ್ರತಿಷ್ಠಿತ ನ್ಯಾಯವಾದಿಗಳೊಂದಿಗೆ ರಾಮಣ್ಣ ಭಂಡಾರಿ ಅವರು ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳಾಗಿದ್ದ ಶ್ರೀ ಬಿ.ಎನ್.ಕೃಷ್ಣಾ ಅವರಿಂದ ಶ್ರೀ ರಾಮಣ್ಣ ಭಂಡಾರಿಯವರು ಸನ್ಮಾನಿತರಾಗಿದ್ದಾರೆ. 
ಇದು ಅವರ ಕಾರ್ಯದಕ್ಷತೆಗೆ ಸಿಕ್ಕ ಅತೀ ದೊಡ್ಡ ಗೌರವವಾಗಿದೆ.
ನ್ಯಾಯಕ್ಕೆ ಸಂದ ಗೌರವ
         ಶ್ರೀ ರಾಮಣ್ಣ ಭಂಡಾರಿ ಯವರು ನಮ್ಮ ಭಂಡಾರಿ ಕುಟುಂಬದ ಹೆಮ್ಮೆಯ ಪುತ್ರ.ಇವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬಯಿಯಲ್ಲಿ ಒಬ್ಬ ಒಳ್ಳೆಯ ನಿಷ್ಠಾವಂತ ಅಡ್ವೋಕೇಟ್ ಆಗಿ ಗುರುತಿಸಿಕೊಂಡಿರುವ ಇವರು ಭಂಡಾರಿ ಸಮಾಜದೊಂದಿಗೆ,ಮುಂಬಯಿಯ ತುಳುಕೂಟ,ಕರ್ನಾಟಕ ಸಂಘಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ವಿಶೇಷ ಸಮ್ಮಾನ ಹಿನ್ನೆಲೆಯಲ್ಲಿ ಶ್ರೀ ರಾಮಣ್ಣ ಭಂಡಾರಿಯವರಿಗೆ ಶುಭಾಶಯ ಕೋರಲು ಕರೆ ಮಾಡಿದ ಭಂಡಾರಿವಾರ್ತೆ ಯೊಂದಿಗೆ ಮಾತನಾಡಿದ ಅವರು ನನ್ನ ಕಾನೂನು ಸೇವಾ ಜೀವನದಲ್ಲಿ ನನಗೆ ದೊರೆತ ಅತೀ ಶ್ರೇಷ್ಠ ಗೌರವ ಇದಾಗಿದೆ ಎಂದು ತಮ್ಮ ಮನದಾಳದ ಸಂತಸವನ್ನು ನಮ್ಮೊಂದಿಗೆ ಹಂಚಿಕೊಂಡರು.
ಮುಂಬಯಿಯಲ್ಲಿ ಪತ್ನಿ ಶ್ರೀಮತಿ ಸುಮಿತ್ರಾ. ಆರ್.ಭಂಡಾರಿ, ಮಗ ಸೂರಜ್. ಆರ್. ಭಂಡಾರಿ, ಮಗಳು ಕ್ಷಮಾ.ಆರ್.ಭಂಡಾರಿ ಯವರೊಂದಿಗೆ ಸಂತೃಪ್ತ ಜೀವನ ನೆಡೆಸುತ್ತಿರುವ ಶ್ರೀ ರಾಮಣ್ಣ ಭಂಡಾರಿ ಯವರಿಗೆ  ಭಗವಂತನು ಆಯುರಾರೋಗ್ಯ ಭಾಗ್ಯ ಕರುಣಿಸಲಿ, ನ್ಯಾಯದೇವತೆಯ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ, ಅವರ ಜೀವನದಲ್ಲಿ ಮತ್ತಷ್ಟು ಯಶಸ್ಸು ದೊರಕಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭಹಾರೈಸುತ್ತದೆ.
ಮಾಹಿತಿ: ಪ್ರಕಾಶ್ ಭಂಡಾರಿ ಕಟ್ಲಾ
ನಿರೂಪಣೆ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ

2 thoughts on “ಭಂಡಾರಿ ಪುತ್ರನಿಗೊಲಿಯಿತು ಹೆಮ್ಮೆಯ ಗೌರವ

Leave a Reply

Your email address will not be published. Required fields are marked *