January 18, 2025
Ramanna Bhandary Narve1

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಾರ್ವೆಯಲ್ಲಿ ಶ್ರೀ ರಾಮಣ್ಣ ಭಂಡಾರಿಯವರು ಜುಲೈ 31 ರ ಸೋಮವಾರ ಹೃದಯಾಘಾತಕ್ಕೊಳಗಾಗಿ ಅಸುನೀಗಿದರು.ಅವರಿಗೆ 68 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಶ್ರೀಮತಿ ಕುಸುಮಾ ರಾಮಣ್ಣ ಭಂಡಾರಿ,ಮಗ ಶ್ರೀ ರಾಘವೇಂದ್ರ ಭಂಡಾರಿ ಮತ್ತು ಮಗಳು ಶ್ರೀಮತಿ ಪೂರ್ಣಿಮಾ ಸುಧೀರ್ ಭಂಡಾರಿ,ಮೊಮ್ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.ಮಕ್ಕಳಿಬ್ಬರೂ ಮುಂಬಯಿಯಲ್ಲಿ ನೆಲೆಸಿರುವುದರಿಂದ ಅವರ ಆಗಮನದ ನಂತರ ಜುಲೈ 31ರ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಶ್ರೀ ರಾಮಣ್ಣ ಭಂಡಾರಿಯವರು ಸಾವಿನಲ್ಲೂ ಸಾರ್ಥಕತೆಯನ್ನು ಪಡೆದುಕೊಂಡಿದ್ದಾರೆ.ಕುಟುಂಬದವರೆಲ್ಲ ಒಟ್ಟಾಗಿ ತೀರ್ಮಾನಿಸಿ ಮೃತರ ಕಣ್ಣುಗಳನ್ನು ದಾನ ಮಾಡುವ ಮುಖಾಂತರ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ.

ರಾಮಣ್ಣ ಭಂಡಾರಿಯವರು ನಮ್ಮ ಯುವಲೇಖಕ ಶ್ರೀ ಹರೀಶ್ ನಾರ್ವೆಯವರಿಗೆ ದೊಡ್ಡಪ್ಪ ಮತ್ತು ಕೊಪ್ಪ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜ ಭಂಡಾರಿಯವರ ಸೋದರಮಾವ.

ಮೃತಪಟ್ಟ ನಮ್ಮ ಸಮಾಜದ ಹಿರಿಯರಾದ ರಾಮಣ್ಣ ಭಂಡಾರಿಯವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ,ನೇತ್ರದಾನ ಮಾಡಿ ನಮ್ಮ ಭಂಡಾರಿ ಸಮಾಜಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ಕುಟುಂಬವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *