January 18, 2025
WhatsApp Image 2019-11-05 at 23.20.52 (1)

ಉಡುಪಿ ತೋಟದ ಮನೆ ದಿವಂಗತ ಸರಸು ಭಂಡಾರಿ ಮತ್ತು ದಿವಂಗತ ವಾಸು ಭಂಡಾರಿ ಯವರ ಪುತ್ರ ದೊಡ್ಡಣಗುಡ್ಡೆಯ ಶ್ರೀ ರತ್ನಾಕರ್ ಭಂಡಾರಿ ಯವರು ಅಲ್ಪಕಾಲದ ಅಸೌಖ್ಯದಿಂದ ನವೆಂಬರ್ 6 ರ ಬುಧವಾರ ವಿಧಿವಶರಾದರು. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು.


ಉಡುಪಿಯ ಕೆ ಇ ಬಿ ಯಲ್ಲಿ ವೃತ್ತಿ ಜೀವನ ಆರಂಭಿಸಿದ್ದ ರತ್ನಾಕರ್ ಭಂಡಾರಿ ಉಡುಪಿಯ ಮೆಸ್ಕಾಂ ನಲ್ಲಿ ಲೆಕ್ಕಾಧಿಕಾರಿಯಾಗಿ ಸುಮಾರು 34 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು .


ಭಂಡಾರಿ ಸಮಾಜ ಸಂಘ ಉಡುಪಿ ವಲಯದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ರತ್ನಾಕರ್ ಭಂಡಾರಿ ಯವರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು .

ದಿವಂಗತರು ಪತ್ನಿ ಶ್ರೀಮತಿ ಕುಸುಮಾ ,ಓರ್ವ ಸಹೋದರ , ಮೂವರು ಸಹೋದರಿಯರು , ಇಬ್ಬರು ಗಂಡು ಮಕ್ಕಳಾದ ಪ್ರಶಾಂತ್ ಮತ್ತು ಸೊಸೆ ಪ್ರೀತಿ ಪ್ರಶಾಂತ್ , ಮೊಮ್ಮಗ ಹಾಗೂ ರಂಜಿತ್ ಮತ್ತು ಸೊಸೆ ವಿನುತಾ ರಂಜಿತ್ ,  ಕುಟುಂಬಸ್ಥರು ,ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ .

ಮೃತರ ಅಂತ್ಯಕ್ರಿಯೆಯು ನವೆಂಬರ್ 7 ರ ಗುರುವಾರ ಸ್ವಗೃಹ ದೊಡ್ಡಣಗುಡ್ಡೆಯಲ್ಲಿ ನಡೆಯಿತ್ತಿದೆ .


ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ಪರಮಾತ್ಮನು ಕರುಣಿಸಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *