January 18, 2025
2

ಒಣ ಖರ್ಜೂರಕ್ಕಿಂತ ಹಸಿ ಖರ್ಜೂರ ಆರೋಗ್ಯಕ್ಕೆ ತುಂಬಾ ಬೆಸ್ಟ್!

ನೀವು ಸಹ ಖರ್ಜೂರ ತಿನ್ನುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳು ನಿಮಗೆ ಗೊತ್ತಿಲ್ಲದಂತೆ ಮಾಯವಾಗುತ್ತವೆ.

ಡ್ರೈ ಫ್ರೂಟ್ಸ್ ಎಂದಿಗೂ ತಮ್ಮ ಸ್ಟೇಟಸ್ ಮೈನ್ಟೈನ್ ಮಾಡಿಕೊಳ್ಳುವಲ್ಲಿ ಹಿಂದೇಟು ಹಾಕುವುದಿಲ್ಲ. ಕೊಡುವ ಆರೋಗ್ಯ ಪ್ರಯೋಜನಗಳಲ್ಲೂ ಮತ್ತು ರೇಟ್ ನಲ್ಲೂ ಯಾವಾಗಲೂ ಮೇಲುಗೈ ಸಾಧಿಸುತ್ತವೆ. ಇವುಗಳಲ್ಲಿ ಖರ್ಜೂರ ಕೂಡ ಒಂದು. ಮಾರುಕಟ್ಟೆಯಲ್ಲಿ ಒಣ ಖರ್ಜೂರ ಮತ್ತು ಹಸಿ ಖರ್ಜೂರ ಕೊಳ್ಳಲು ಸಿಗುತ್ತದೆ.

ಆದರೆ ಜನರಿಗೆ ಯಾವುದು ಆರೋಗ್ಯಕರ ಎಂಬುದೇ ಒಂದು ಕನ್ಫ್ಯೂಷನ್! ಡಾಕ್ಟರ್ ಹೇಳುವ ಪ್ರಕಾರ ಒಣಗಿದ ಖರ್ಜೂರಗಳಿಗೆ ಹೋಲಿಸಿದರೆ ಹಸಿ ಖರ್ಜೂರ ಒಳ್ಳೆಯ ಪ್ರಮಾಣದಲ್ಲಿ ಆರೋಗ್ಯಕ್ಕೆ ಲಾಭಗಳನ್ನು ಒದಗಿಸುತ್ತದೆ. ಯಾವೆಲ್ಲ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು….

ಮಲಬದ್ಧತೆ ಹೋಗಲಾಡಿಸುತ್ತದೆ

  • ಖರ್ಜೂರ ತನ್ನಲ್ಲಿ ಹೇರಳವಾದ ಪ್ರಮಾಣದಲ್ಲಿ ನಾರಿನ ಅಂಶ ಒಳಗೊಂಡಿದೆ. ಮನುಷ್ಯನ ದೇಹಕ್ಕೆ ಇದರಿಂದ ಕರಗುವ ಮತ್ತು ಕರಗದಿರುವ ನಾರಿನ ಪ್ರಮಾಣ ಸಿಗುತ್ತದೆ.
  • ಹಾಗಾಗಿ ಹೊಟ್ಟೆಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ಇದರಿಂದ ಪರಿಹಾರವಾಗುತ್ತದೆ. ಉದಾ ಹರಣೆಗೆ ಹೊಟ್ಟೆ ಉಬ್ಬರ, ಅಜೀರ್ಣತೆ, ಮಲಬದ್ಧತೆ, ಎದೆಯುರಿ ಮಾಯವಾಗುತ್ತದೆ.

ಖನಿಜಾಂಶಗಳು ಹೆಚ್ಚಾಗಿ ಸಿಗುತ್ತವೆ

  • ಒಣ ಖರ್ಚೂರಗಳಿಗೆ ಹೋಲಿಸಿದರೆ ಹಸಿ ಖರ್ಜೂರ ತನ್ನಲ್ಲಿ ಅಗತ್ಯ ಪ್ರಮಾಣದ ವಿಟಮಿನ್ ಹಾಗೂ ಖನಿಜಾಂಶಗಳನ್ನು ಒಳಗೊಂಡಿರುತ್ತದೆ.
  • ವೈದ್ಯರು ಹೇಳುವ ಪ್ರಕಾರ ಮನುಷ್ಯನಿಗೆ ಅಗತ್ಯ ಎನಿಸುವ ಮೂಳೆಗಳಿಗೆ ಹಾಗೂ ಮಾಂಸ ಖಂಡ ಗಳಿಗೆ ಅಭಿವೃದ್ಧಿದಾಯಕವಾಗಿರುವ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಇದರಲ್ಲಿ ಹೆಚ್ಚು ಸಿಗುತ್ತದೆ. ಸಂಜೆಯ ಸ್ನಾಕ್ಸ್ ಸಮಯದಲ್ಲಿ ಹಸಿ ಖರ್ಜೂರ ತಿನ್ನುವ ಅಭ್ಯಾಸ ಮಾಡಿಕೊಳ್ಳಬಹುದು.

ವಿಟಮಿನ್ ಅಂಶಗಳಲ್ಲಿ ಇದನ್ನು ಬಿಟ್ಟರೆ ಮತ್ತೊಂದಿಲ್ಲ

  • ಆಗ ತಾನೇ ಮಾರುಕಟ್ಟೆಗೆ ಬಂದಿರುವ ತಾಜಾ ಖರ್ಜೂರಗಳಲ್ಲಿ ನಿಮ್ಮ ಊಹೆಗೂ ಮೀರಿದ ಪ್ರಮಾಣ ದಲ್ಲಿ ವಿಟಮಿನ್ ಅಂಶಗಳು ಸಿಗುತ್ತವೆ.
  • ಉದಾಹರಣೆಗೆ ವಿಟಮಿನ್ ಬಿ6 ಇವುಗಳಲ್ಲಿ ಹೆಚ್ಚಾಗಿ ಕಂಡು ಬರಲಿದ್ದು, ಚರ್ಮದ ಆರೋಗ್ಯಕ್ಕೆ ಅನುಕೂಲಕರವಾಗುವುದು ಮಾತ್ರವ ಲ್ಲದೆ ಗುಂಗುರು ಕೂದಲು ಸಮಸ್ಯೆಯನ್ನು ಪರಿಹರಿಸುತ್ತದೆ. ಮೆದುಳಿನ ಬುದ್ಧಿವಂತಿಕೆಗೆ ಹಾಗು ಚುರುಕುತನಕ್ಕೆ ಖರ್ಜೂರಗಳಿಂದ ಲಾಭ ಸಿಗುತ್ತದೆ.

ತೂಕ ಕಮ್ಮಿ ಆಗುತ್ತೆ

ಖರ್ಜೂರ ತನ್ನಲ್ಲಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದೇ ಇದಕ್ಕೆ ಕಾರಣ. ಆಗಲೇ ಹೇಳಿದಂತೆ ಸಂಜೆಯ ಸಮಯದಲ್ಲಿ ಸ್ನಾಕ್ಸ್ ತರಹ ಖರ್ಜೂರಗಳನ್ನು ತಿನ್ನುವುದರಿಂದ ಹೊಟ್ಟೆ ಹಸಿವು ಉಂಟಾಗು ವುದಿಲ್ಲ ಮತ್ತು ದೇಹದಲ್ಲಿ ಇರುವಂತಹ ಕೊಬ್ಬು ಕರಗುತ್ತದೆ. ಬೇರೆ ಬಗೆಯ ಅನಾರೋಗ್ಯಕರ ಆಹಾರ ಗಳನ್ನು ತಿನ್ನುವುದು ತಪ್ಪುತ್ತದೆ.

ದೇಹಕ್ಕೆ ಶಕ್ತಿ ಸಿಗುತ್ತದೆ

ಕಡಿಮೆ ಸಿಹಿ ಸೂಚ್ಯಂಕ ಹೊಂದಿರುವ ಖರ್ಜೂರಗಳು ನಿಮ್ಮ ದೇಹಕ್ಕೆ ಹೆಚ್ಚು ಶಕ್ತಿಕೊಡುತ್ತವೆ ಮತ್ತು ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಪಾಡುವಲ್ಲಿ ಯಶಸ್ವಿಯಾಗುತ್ತವೆ. ವಿಶೇಷವಾಗಿ ಮಹಿಳೆ ಯರಿಗೆ ಪಿರಿಯಡ್ಸ್ ಸಂದರ್ಭದಲ್ಲಿ ಆಗುವ ಮಾನಸಿಕ ಬದಲಾವಣೆಗೆ ಖರ್ಜೂರಗಳು ಪರಿಹಾರ ಒದಗಿಸುತ್ತವೆ.

ಪ್ರೋಟೀನ್ ಹೆಚ್ಚು ಸಿಗುತ್ತದೆ

  • ದೇಹದ ಮಾಂಸ ಖಂಡಗಳಿಗೆ ಬಲವನ್ನು ಕೊಡವಲ್ಲಿ ಖರ್ಜೂರ ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಪ್ರೋಟೀನ್ ಹೇರಳವಾಗಿದೆ.
  • ಸಣ್ಣ ಇರುವವರು ದಪ್ಪ ಆಗಲು ಹಾಲಿನ ಜೊತೆ ಹಸಿ ಖರ್ಜೂರ ಹಾಕಿಕೊಂಡು ಮಿಲ್ಕ್ ಶೇಕ್ ತರಹ ತಯಾರಿಸಿ ಕುಡಿಯಬಹುದು. ಶಾಲೆಗೆ ಹೋಗುವ ಮಕ್ಕಳಿಗಂತೂ ಇದು ಹೇಳಿ ಮಾಡಿಸಿದ ಡ್ರಿಂಕ್.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

 

Leave a Reply

Your email address will not be published. Required fields are marked *