January 18, 2025
Prakashita99

ಕುಂದಾಪುರದ ಗುಜ್ಜಾಡಿಯಲ್ಲಿ ಶ್ರೀ ಸುಭಾಷ್ ಭಂಡಾರಿ ಮತ್ತು ಶ್ರೀಮತಿ ರೇಖಾ ಸುಭಾಷ್ ಭಂಡಾರಿ ದಂಪತಿಯು ತಮ್ಮ ನವೀಕರಿಸಿದ

“ಪ್ರಕಾಶಿತ”

ನಿಲಯದ ಗೃಹಪ್ರವೇಶ ಸಮಾರಂಭವನ್ನು ಡಿಸೆಂಬರ್ 22, 2018 ರ ಶನಿವಾರ ಅದ್ಧೂರಿಯಾಗಿ ನೆರವೇರಿಸಿದರು.


ದಿವಂಗತ ಮಹಾಬಲ ಭಂಡಾರಿ ಗುಜ್ಜಾಡಿ ಮತ್ತು ವಿಜಯಮ್ಮ ಮಹಾಬಲ ಭಂಡಾರಿ ದಂಪತಿಯ ಪುತ್ರರಾದ ಶ್ರೀ ಸುಭಾಷ್ ರವರು ಕುಂದಾಪುರ ತಾಲ್ಲೂಕು ಭಂಡಾರಿ ಸಮಾಜ ಸಂಘದ ಸಕ್ರಿಯ ಸದಸ್ಯರಾಗಿ, ಕುಂದಾಪುರದ ಜೀವವಿಮಾ ನಿಗಮದ ಪ್ರತಿನಿಧಿಯಾಗಿ ಮತ್ತು ಕುಂದಾಪುರದ ಬಂಡಾರ್ಸ್ಕರ್ ಕಾಲೇಜು ಬಳಿಯಿರುವ ತಮ್ಮ  “ಸುಭಾಷ್ ಜನರಲ್ ಸ್ಟೋರ್ಸ್” ನಿಂದಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.
ಉಡುಪಿ ಕೊಡಂಕೂರಿನ ಶ್ರೀ ಕೃಷ್ಣಭಂಡಾರಿ ಮತ್ತು ಶ್ರೀಮತಿ ಲೀಲಾ ಕೃಷ್ಣ ಭಂಡಾರಿಯವರ ಎರಡನೇ ಮಗಳಾದ ರೇಖಾ ಇವರ ಧರ್ಮಪತ್ನಿ‌

ಗೃಹಪ್ರವೇಶ ಸಮಾರಂಭದ ಶುಭ ಸಂದರ್ಭದಲ್ಲಿ‌ ಮುಂಜಾನೆ ಮನೆಯಲ್ಲಿ ಗಣಹೋಮ, ಕುಲ ದೇವತಾ ಪೂಜೆ ಮತ್ತು ಅಷ್ಟದಿಕ್ಪಾಲಕರ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಮಹೋದಯರಿಗೆ  ಭೋಜನ ಕೂಟ ಏರ್ಪಡಿಸಲಾಯಿತು. 


ಈ ಶುಭ ಸಂದರ್ಭ ದಲ್ಲಿ ಅತ್ತೆ, ಮಾವ, ದಂಪತಿಗಳ ಸಹೋದರ ಸಹೋದರಿಯರು, ಎಲ್ಲಾ ಬಂಧುಗಳು,ಕುಂದಾಪುರ ಮತ್ತು ಸಾಗರ ಭಂಡಾರಿ ಸಮಾಜ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಸ್ನೇಹಿತರು, ಆತ್ಮೀಯರು, ಸಹೋದ್ಯೋಗಿಗಳು ಹಾಜರಿದ್ದು ಶುಭ ಹಾರೈಸಿದರು. 


ನೂತನ ಗೃಹ ಪ್ರವೇಶದ ಈ ಶುಭ ಸಂದರ್ಭದಲ್ಲಿ ಶ್ರೀ ಕಚ್ಚೂರು ನಾಗೇಶ್ವರ ದೇವರು ಸುಭಾಷ್ ದಂಪತಿಗಳು ಮತ್ತು ಅವರ ಮಕ್ಕಳಾದ ಶೀತಲ್  ಮತ್ತು ವಿಶಾಲ್ ಇವರಿಗೆ ಸುಖ, ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಭಂಡಾರಿ ಮನೆ ಮನದ ಮಾತು “ಭಂಡಾರಿವಾರ್ತೆ” ತಂಡ ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ವರದಿ : ಸುಧಾಕರ ಭಂಡಾರಿ ಶಿರಾಳಕೊಪ್ಪ.

1 thought on “ನವೀಕೃತ ಗೃಹ ‘ಪ್ರಕಾಶಿತ’ ನಿವಾಸದ ಗೃಹಪ್ರವೇಶ

Leave a Reply

Your email address will not be published. Required fields are marked *