
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದ ಶ್ರೀ ಶ್ರೀನಿವಾಸ ಭಂಡಾರಿ ಮತ್ತು ಶ್ರೀಮತಿ ಗೀತಾ ಶ್ರೀನಿವಾಸ್ ಭಂಡಾರಿ ದಂಪತಿಯ ಪುತ್ರಿ…

ಚಿ॥ಸೌ॥ ಪ್ರತಿಭಾ.
ಮತ್ತು ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯ ದಿವಂಗತ ಜಗದೀಶ್ ಭಂಡಾರಿ ಮತ್ತು ಸುಜಾತ ಜಗದೀಶ್ ಭಂಡಾರಿಯವರ ಪುತ್ರ…
ಚಿ॥ ವಿಜೇತ್.

ಇವರ ವಿವಾಹ ಮಹೋತ್ಸವವು ಡಿಸೆಂಬರ್ 10,2018 ರ ಸೋಮವಾರ ಬೆಳಿಗ್ಗೆ 10:30 ರಿಂದ 11:30 ರ ಮಕರ ಲಗ್ನ ಸುಮುಹೂರ್ತದಲ್ಲಿ ಕೊಪ್ಪ ತಾಲೂಕಿನ ಸಿಗದಾಳು ಗ್ರಾಮದ “ಶ್ರೀ ಅಣ್ಣಪ್ಪ ಪೈ ಸಭಾ ಭವನ” ದಲ್ಲಿ ವಿಜೃಂಭಣೆಯಿಂದ ನೆರವೇರಿತು.

ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದ ಗುರು ಹಿರಿಯರು, ಬಂಧು ಮಿತ್ರರು, ಹಿತೈಷಿಗಳು, ಆತ್ಮೀಯರು, ಸಹೋದ್ಯೋಗಿಗಳು ನೂತನ ವಧುವರರಿಗೆ ಶುಭ ಹಾರೈಸಿ, ಆಶೀರ್ವದಿಸಿ, ಯಥೋಚಿತ ಸತ್ಕಾರ ಸ್ವೀಕರಿಸಿದರು.

ವಿವಾಹ ಬಂಧನದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ವಿಜೇತ್ ಮತ್ತು ಪ್ರತಿಭಾ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಲಿ, ಅವರ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
–ಭಂಡಾರಿ ವಾರ್ತೆ.