January 18, 2025
WhatsApp Image 2023-06-05 at 6.53.05 AM

ದೇಶದಾದ್ಯಂತ ಈಗ ಕೇಳಿ ಬರುವ ವಿಷಯ ಎಂದರೆ “ಸೆಂಗೋಲ್” ಮತ್ತು ಇದರ ಚರಿತ್ರೆ ಇತಿಹಾಸ. ಚರಿತ್ರೆ ಇತಿಹಾಸದ ಬಗ್ಗೆ ನನಗೇನೂ ತಿಳಿದಿಲ್ಲ. ಚರಿತ್ರೆ, ಇತಿಹಾಸ, ಶಾಸನಗಳು ಇದ್ದರೂ ಅವುಗಳು ನೂರಕ್ಕೆ ನೂರು ಪಾಲು ಸತ್ಯ ಎಂದು ಹೇಳಲು ಬರುವುದಿಲ್ಲ. ಏಕೆಂದರೆ ಅವುಗಳನ್ನು ನಂತರದ ಪೀಳಿಗೆಯ ರಾಜರು ವಿದ್ವಾಂಸರು ತಮಗೆ ಬೇಕಾದಂತೆ ಬರೆದಿರಬಹುದು. ಚೈನಾ,ಇಟೆಲಿ, ಫ್ರಾನ್ಸ್ ಇತ್ಯಾದಿ ದೇಶದ ಬರಹಗಾರರು ಭಾರತದ ಬಗ್ಗೆ ಬರೆದಿರುವುದು ಕಾಣುತ್ತೇವೆ. ಇಲ್ಲಿ ಭಾರತದ ಬಗ್ಗೆ ಅವರಿಗೇನು ಗೊತ್ತಿತ್ತು?ಇಲ್ಲಿಯವರೇ ಅವರಿಂದ ಹೇಳಿದಂತೆ ಬರೆಸಿದ್ದಾರೆ. ಕೆಲವೆಡೆಗಳಲ್ಲಿ ಉತ್ಖನದ ಸಮಯದಲ್ಲಿ ಶಾಸನ ಕಲ್ಲುಗಳು ನಮಗೆ ಭೂಮಿಯ ಅಡಿಯಲ್ಲಿ ದೊರೆಯುತ್ತದೆ. ಅದು ಹೇಗೆ ಸಾಧ್ಯ? ಅದು ಒಬ್ಬ ರಾಜನು ಬರೆದು ನೆಟ್ಟಿರುವ ಅವನ ಶಾಸನದ ಕಲ್ಲನ್ನು ನಂತರದ ಪೀಳಿಗೆಯ ರಾಜರು ಇಲ್ಲವೇ ವಿದ್ವಾಂಸರು ತೆಗೆದು ಬೇರೆ ಕಡೆಗಳಲ್ಲಿ ಮಣ್ಣಿನ ಅಡಿಗೆ ಹಾಕಿ ಅವರಿಗೆ ಬೇಕಾದ ಶಾಸನವನ್ನು ಬರೆಸಿಡು ವುದು. ಇನ್ನು ಕೆಲವೆಡೆಗಳಲ್ಲಿ ನೆಟ್ಟಿರುವ ಶಾಸನದಲ್ಲಿ ಕಲ್ಲಿನಲ್ಲಿ ಉಜ್ಜಿ ತೆಗೆದಿರುವುದು ನೋಡಬಹುದು. ಇದನ್ನೆಲ್ಲಾ ಅಗೆಯಲು ಹೋದರೆ ತುಂಬಾ ಜನರಿಗೆ ಸಿಟ್ಟು ಬರುತ್ತದೆ. ಅದಕ್ಕೆ ಯಾರೂ ಅಗೆದು ಸತ್ಯಾಸತ್ಯತೆ ಯನ್ನು ಹೊರಗೆ ಹಾಕಲು ಹೋಗೊಲ್ಲ. ಸುಳ್ಳು ಕತೆಯನ್ನೇ ಸತ್ಯ ಎಂದು ಬರೆದರೆ ಅದನ್ನು ನಂಬುವ ಜನರು ಅಧಿಕ ಪ್ರಮಾಣದಲ್ಲಿ ಇರುವುದು ಕಂಡು ಬರುತ್ತದೆ. ಅದ್ದರಿಂದ ಸತ್ಯವನ್ನು ಹೊರಗೆ ತರಲು ಕಾಯಬೇಕು ಅಷ್ಟೇ.

ಇತಿಹಾಸ ಚರಿತ್ರೆಗಳು ಒಂದು ಮೂಲೆಯಲ್ಲಿ ಇರಲಿ. ನಾನು ಈಗ ಹೇಳಲು ಹೊರಟಿರುವುದು “ಸೆಂಗೋಲ್” ಶಬ್ಧದ ಕುರಿತು. ಈ ಶಬ್ಧವು ತಮಿಲ್ ಭಾಷೆಯಿಂದ ಬಂದಿರುತ್ತದೆ ಎಂದು ಎಲ್ಲಾ ಪೇಪರ್ ಪತ್ರಿಕೆಗಳಲ್ಲಿ ಬರೆದಿರುತ್ತಾರೆ. ಅಲ್ಲದೆ ಮಾಧ್ಯಮಗಳಲ್ಲೂ ಅದೊಂ ದು ತಮಿಲ್ ಪದ ಎಂದು ವಿದ್ವಾಂಸರು ಪಂಡಿತರು ವ್ಯ ಕ್ತ ಪಡಿಸಿದ್ದಾರೆ. ಅಂತರ್ಜಾಲದಲ್ಲೂ ಹುಡುಕಿದಾಗ ಅದೇ ರಾಗ ಎಳೆಯುವುದು ಕಾಣುತ್ತದೆ.

 

ಸೆಂಗೋಲ್ ತಪ್ಪು “ಸೈಂಗೋಲ್” ಸರಿಯಾದ ಪದ. “ಸೈಂಗೋಲ್”ಎಂಬುದು ಅಪ್ಪಟ ತುಲು ಶಬ್ಧವಾಗಿದೆ. ತುಲು ಪದ “ಸೈಂಗೋಲ್” ನ್ನು ಸೆಂಗೋಲ್ ಎಂದು ತಪ್ಪಾಗಿ ಉಚ್ಛರಿಸಿದ ತಮಿಲರು ಅದು ತಮಿಲ್ ಭಾಷೆ ಯಿಂದ ಬಂದಿದೆ ಎನ್ನುತ್ತಾರೆ. ಸೆಂಗೋಲ್ ಪದವು ಸೆಮ್ಮೈ ಶಬ್ಧದಿಂದ ಬಂದಿದೆ‌.ಇದರ ಅರ್ಥವು ಸಮೃದ್ಧಿ, ಸಂಪತ್ತು, ಸದಾಚಾರ ಎಂದಿದ್ದಾರೆ. ರಾಜದಂಡ,ಧರ್ಮ ದಂಡ,ನ್ಯಾಯದಂಡ ಎಂತಲೂ ಕೆಲವು ತಮಿಲ್ ಬರಹ ಗಾರರು ಅರ್ಥೈಸಿದ್ದಾರೆ. ಸೆಂಗೋಲ್ ಆಡಳಿತಗಾರನು ಕಾನೂನಿನ ಅಡಿಯಲ್ಲಿ ಇರುತ್ತಾನೆ ಎಂಬುದರ ಸಂಕೇತ ಆಗಿದೆ ಎಂತಲೂ ಹೇಳಿದ್ದಾರೆ. ಚೋಳರ ಕಾಲದಲ್ಲಿ ಇದು ಆರಂಭಗೊಂಡಿದೆ ಎನ್ನುತ್ತಾರೆ.

 

“ಸೈಂಗೋಲ್” ಎಂಬುದು ತುಲು ಭಾಷೆಯ ಶಬ್ಧ ಆಗಿರುತ್ತದೆ. ಇದರ ಮೂಲ ಉಚ್ಛಾರ “ಸೈ-ಕೋಲ್” ಎಂದಾಗಿದೆ.”ಸೈ”ಎಂದರೆ ಸಮ್ಮತಿ ಕೊಡುವುದು. ಅನುಮೋದನೆ ಮಾಡುವುದು. ಒಪ್ಪಿಗೆ ಕೊಡುವುದು. ಹೌದು ಖಂಡಿತವಾಗಿಯೂ ಸರಿ ಎನ್ನುವುದು.”ಈರ್ ಪಂಡಿನೈಕ್ ಯಾನ್ ಸೈ ಪನ್ಪೆ ದನಿಕುಲೆ”(ನಿಮ್ಮ ಹೇಳಿ ಕೆಗೆ ಒಪ್ಪಿದ್ದೇನೆ ಧನಿ)”ಆಯನ ಪಾತೆರೊಗು ಮತೆರ್ಲಾ ಸೈ ಪನೊಡು”(ಆತನ ಮಾತಿಗೆ ಎಲ್ಲರೂ ಸಮ್ಮತಿ ಕೊಡ ಬೇಕು). “ಸೈ” ಎಂದರೆ ಸಹಮತವಿದೆ, ಅಂಗೀಕಾರ ಪಡೆ ದಿದೆ,ದೃಢೀಕರಣವಾಗಿದೆ ಎಂಬ ಅರ್ಥವೂ ಬರುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಹೇಳುವುದಾದರೆ Consent, Approval, Confirmation ,OK,Pass ಇತ್ಯಾದಿ ಆಗಿದೆ.ಇನ್ನು “ಕೋಲ್”ಎಂದರೆ ಮರದಿಂದ ತಯಾರಿ ಸಿದ ದಂಡ, ದಂಟೆ(ದೊಣ್ಣೆ)ಆಗಿದೆ. ಕ್ರಮೇಣವಾಗಿ “ಸೈಕೋಲ್” ಪದವನ್ನು “ಸೈಂಗೋಲ್” ಎಂದು
ಕರೆದಿದ್ದಾರೆ. “ಕ”ಕಾರಕ್ಕೆ “ಗ”ಬರುವುದು ಸಾಮಾನ್ಯ.

 

 

ಪಟ್ಟಾಭಿಷೇಕದ ಸಮಯದಲ್ಲಿ ರಾಜಭಾರವನ್ನು ಒಂದು ರಾಜನಿಂದ ಇನ್ನೊಂದು ರಾಜನಿಗೆ ಹಸ್ತಾಂತರ ಮಾಡುವ “ಸೈಂಗೋಲ್” ಸಂಪ್ರದಾಯವು ಮೊಟ್ಟ ಮೊದಲು ಆರಂಭ ಆಗಿದ್ದು ತುಲುನಾಡಲ್ಲಿ. ಅದು ಪಾಂಡ್ಯರ ಕಾಲದಲ್ಲಿ. ಚೋಳರ ಮೊದಲೇ ಪಾಂಡ್ಯರು ಅರ ಸರಾಗಿದ್ದವರು. ತಮಿಲ್ ನಾಡಲ್ಲೂ ಇವರ ರಾಜ್ಯಭಾರ ಇತ್ತು. ಆ ಕಾಲದಲ್ಲಿ ಈಗಿನಂತೆ ಯಾವುದೇ ಕಡತಗಳು ಇರಲಿಲ್ಲ‌. ಒಬ್ಬ ಅರಸ ಕಾಲವಾದಾಗ ರಾಜ್ಯದ ಅಧಿಕಾ ರವನ್ನು ಇನ್ನೋರ್ವ ಅರಸನಿಗೆ ಅಂದರೆ ಅವನ ಉತ್ತರಾಧಿಕಾರಿಗೆ ಹಸ್ತಾಂತರ ಗೊಳಿಸಲು ಅದು ಸುಲಭವಾಗಲು ಒಂದು ಸಂಪ್ರದಾಯದ ಸಂಕೇತವನ್ನು ಹುಟ್ಟು ಹಾಕುವರು. ಆ ಸಂಕೇತವೇ “ಸೈಂಗೋಲ್” ಎಂಬ ರಾಜದಂಡ ಅಥವಾ “ಸೈ”ಎನಿಸುವ ಕೋಲು. ಅಕ್ಕಪಕ್ಕದ ಅರಸರು ಮತ್ತು ಕಾಲವಾದ ರಾಜನ ಕುಟುಂಬದ ಸದಸ್ಯರ ಸಮ್ಮುಖದಲ್ಲಿ “ಸೈಂಗೋಲ್”ನ್ನುಕಾನೂನಿನಂತೆ ಎಲ್ಲರೂ ಒಪ್ಪುವಂತೆ ಸಮ್ಮತಿಸುವಂತೆ ಹಸ್ತಾಂತರ ಮಾಡುವುದು. ಪಟ್ಟದ ದಂಡ,ಪಟ್ಟದ ಕತ್ತಿ, ಪಟ್ಟದ ಉಂಗುರ ಇವೆಲ್ಲಾ ಅಂದಿನ ರಾಜಮನೆತನದ ಸಂಪ್ರದಾಯದ ಪ್ರಕ್ರಿಯೆ.

 

“ಸೈಂಗೋಲ್”ಎಂಬ ಪದವು ಈ ಪಾಂಡ್ಯರಿಂದ ಹುಟ್ಟಿರುವುದಲ್ಲ. ಇದಕ್ಕಿಂತಲೂ ಮೊದಲು ಇಲ್ಲಿನ ಮೂಲ ನಿವಾಸಿಗಳ ಕಾಲದಿಂದಲೂ ತುಲು ಭಾಷೆಯಲ್ಲಿ ಸೇರಿತ್ತು. “ಕಬೆಕೋಲ್” ಎಂಬ ಮರದ ಸಾಧನವನ್ನು “ಸೈ ಕೋಲ್” ಎಂದು ಕರೆದವರು ಕೊನೆಗೆ “ಸೈಂಗೋಲ್”ಎಂದು ಕರೆದಿದ್ದಾರೆ. “ಕಬೆಕೋಲ್” ಹೇಗಿತ್ತು ಅಂದರೆ ಅದು ಸುಮಾರು ಐದು ಅಡಿ ಎತ್ತರ ಇದ್ದು ಮೇಲಿನ ಭಾಗದಲ್ಲಿ ಮೂರು ಮೊನಚಾದ ಕಬೆ (ಮೊನೆ)ಗಳಿದ್ದವು. ಕೆಳಭಾಗವು ಮೊಣಚಾಗಿ ಇರುತ್ತದೆ. ಇದನ್ನು ವಿವಿಧ ಉದ್ದೇಶಗಳಿಗೆ ಬಳಸುತ್ತಿದ್ದರು. ಪ್ರಾಣಿ ಗಳಿಂದ ರಕ್ಷಿಸಿಕೊಳ್ಳಲು ಬರುತಿತ್ತು. ದಾರಿಯಲ್ಲಿ ಹಾವು ಅಡ್ಡ ಬಂದರೂ ರಕ್ಷಿಸಿ ಕೊಳ್ಳಲು ಬರುತ್ತಿತ್ತು. ಕೃಷಿ ಕೆಲಸದಲ್ಲೂ ಈ ಸಾಧನವನ್ನು ಬಳಸುವುದು ಇತ್ತು. ಕಬೆ ಕೋಲು ಇದರ ಕಬೆಗಳಿಂದ ಮುಳ್ಳು ಸಂಗ್ರಹಿಸಿ ಬೇಲಿ ಯನ್ನು ಕಟ್ಟುತ್ತಿದ್ದರು. ಕಬೆಕೋಲು ಇದರ ಕೆಳಗಿನ ಮೊಣಚಾದ ಭಾಗದಿಂದ ಗುಳಿ ತೋಡಿ ಸೂನ ಹಾಕಿ ಭೂಮಿಯ ಪ್ರದೇಶವನ್ನು ಭದ್ರ ಮಾಡುತ್ತಿದ್ದರು. ಒಟ್ಟಿನಲ್ಲಿ ಈ ಕಬೆಕೋಲ್ ಎಲ್ಲಕ್ಕೂ ಸೈ (ಒಪ್ಪು)ಎನಿ ಸುತ್ತಿತ್ತು. ಪ್ರಾಚೀನ ಕಾಲದಿಂದಲೂ ತುಲುನಾಡಲ್ಲಿ ಕಾಡು ಪ್ರಾಣಿಗಳ ಕಾಟ ಬಹಳವಾಗಿತ್ತು. ಅದರಲ್ಲೂ ಹುಲಿ ಮತ್ತು ಹಂದಿಗಳಿಂದ ರಕ್ಷಿಸಲು ಅಂದು ಈ ಕಬೆಕೋಲ್ ಪ್ರಮುಖ ಸಾಧನ ಆಗಿತ್ತು ಎನ್ನುತ್ತಾರೆ.

 

ಅಂದಿನ ರಾಜಮನೆತನದ ದಂಡದ ವಿನ್ಯಾಸವು ಆ ಕಾಲದ ಕಬೆಕೋಲ್ ಶೈಲಿಯಲ್ಲಿ ಇತ್ತು. ತ್ರಿಶೂಲ ದಂತೆ ಮೂರು ಮೊನೆಗಳು ಇದ್ದವು. ಆದ್ದರಿಂದ ಇದರ ಹೆಸರು ಮೂಲ ತುಲು ಹೆಸರಲ್ಲೇ ಕರೆದರು. ಕಾಲದಿಂದ ಕಾಲಕ್ಕೆ ಇದರ ವಿನ್ಯಾಸವು ಬದಲಾವಣೆ ಆಗಿದ್ದರೂ ಹೆಸರು ಮಾತ್ರ ಮೂಲದ ಹೆಸರಲ್ಲೇ ಮುಂದುವರಿದಿದೆ. ನಂತರದ ಕಾಲದಲ್ಲಿ ಮರದ ಸೈಂಗೋಲ್ ಹೋಗಿ ಕಬ್ಬಿಣದ ಸೈಂಗೋಲ್ ಬರುತ್ತದೆ. ಇದು ಮರದ ಸೈಂಗೋಲ್ ಗಿಂತ ಸಬಲವಾಗಿತ್ತು. ಬಲವಾಗಿ ಶಕ್ತಿಯು ತವಾಗಿತ್ತು.ಗಟ್ಟಿಯಾಗಿತ್ತು. ಕನ್ನಡ ಪದ “ಸಬಲ”ವನ್ನು “ಸಬ್ಬಲ್”ಎಂದು ಉಚ್ಛರಿಸುವರು. ಈಗಲೂ ಈ ದಂಡವನ್ನು ತುಲುವರು ಸೈಂಗೋಲ್ ಮತ್ತು ಸಬ್ಬಲ್ ಎಂಬ ಹೆಸರಲ್ಲಿ ಕರೆಯುತ್ತಾರೆ. ರಾಜರ ದಂಡದ ತಯಾರಿ ಈಗ ಮರದಿಂದ ಕಬ್ಬಿಣ ಬೆಳ್ಳಿ ಬಂಗಾರದವರೆಗೆ ಹೋಗಿದೆ.

 

ತಮಿಲ್ ಭಾಷೆಯ ಮೂಲ ತುಲು ಎಂದು ತಮಿಲ್ ಭಾಷೆಯ ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದರು. ಆ ಕಾರಣದಿಂದಾಗಿಯೇ “ಸೈಂಗೋಲ್”ಪದವನ್ನು ಈಗಿನ ತಜ್ಞರು “ಸೆಂಗೋಲ್” ಎಂಬುದು ತಮಿಲ್ ಪದ ಎಂದಿ ರುವುದು. ಆ ಕಾಲದಲ್ಲಿ ತುಲುನಾಡು ತಮಿಲುನಾಡು ‌ಸಂಸ್ಥಾನಕ್ಕೆ ಸೇರಿದ್ದರಿಂದ ಇಲ್ಲಿನ ತುಲು ಶಬ್ದಗಳು ತಮ್ಮದೇ ಎಂದು ಬರೆದಿದ್ದಾರೆ. ತುಲು ಭಾಷೆಯು ವಿಶ್ವದಲ್ಲೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ತಮಿಲ್ ಭಾಷೆಯು “ತಮೆಲ್”(overflowing)ಎಂಬ ತುಲು ಪದದಿಂದಲೇ ಹುಟ್ಟಿದೆ. ಅದೇ ರೀತಿ “ಲೆಂಕಿರಿ”ಎಂಬ ತುಲು ಪದದಿಂದ “ಸಿರಿಲಂಕ”ಎಂಬ ಹೆಸರು ಬಂದಿದೆ. ತಮಿಲುನಾಡು ಮತ್ತು ಕೇರಳದ ಹಲವು ಊರುಗಳ ಹೆಸರುಗಳು ತುಲು ಭಾಷೆಯಿಂದ ಬಂದಿರುವುದು ತಿಳಿಯುತ್ತದೆ. ಆಂಗ್ಲ ಭಾಷೆಯಲ್ಲೂ ತುಲು ಪದಗಳು ಹಲವು ಇದೆ.ಉದಾ:ಈಟ್,ಕಾರ್,ಬೋರು,ಸೈ(ಸಯಿ-ಸಹಿ)ಇತ್ಯಾದಿ.

 

ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ
(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್)

 

1 thought on “ಸೆಂಗೋಲ್ ತಪ್ಪು ಸೈಂಗೋಲ್

Leave a Reply

Your email address will not be published. Required fields are marked *