January 18, 2025
sajan housewarming

ಮುಂಬಯಿಯಲ್ಲಿ ಬ್ಯಾಂಕ್ ಉದ್ಯೋಗಿಗಳಾಗಿರುವ ಶ್ರೀ ಸಜನ್ ಭಂಡಾರಿ ಮತ್ತು ಶ್ರೀಮತಿ ಗೀತಾ ಸಜನ್ ಭಂಡಾರಿ ದಂಪತಿಯು…
“ಸಾಲ್ಸಾರ್ ಅರ್ಪಣ್, B ವಿಂಗ್ 408. ಕನಾಕಿಯಾ ರಸ್ತೆ, ಹೋಟೆಲ್ ವುಡ್ ಲ್ಯಾಂಡ್ ಇನ್ ಬಳಿ. L.R ತಿವಾರಿ ಕಾಲೇಜು ಎದುರು.
ಮೀರಾ ರೋಡ್(ಪೂರ್ವ) ಥಾಣೆ – 401107. ಮುಂಬಯಿ.” ಇಲ್ಲಿ ತಾವು ನೂತನವಾಗಿ ಖರೀದಿಸಿದ ಪ್ಲ್ಯಾಟ್ ನ ಗೃಹಪ್ರವೇಶವನ್ನು ಸೆಪ್ಟೆಂಬರ್ 16 ರ ಭಾನುವಾರ ಬೆಳಿಗ್ಗೆ 9:30 ರಿಂದ 2:30 ರ ವರೆಗಿನ ಶುಭ ಮಹೂರ್ತದಲ್ಲಿ ಶ್ರೀ ಸತ್ಯ ನಾರಾಯಣ ಪೂಜೆಯೊಂದಿಗೆ ನೆರವೇರಿಸಿದರು. ಶ್ರೀವೈಕುಂಠ ಭಟ್,ಶನಿಮಂದಿರ ಜೊಗೆಶ್ವರಿ ಇವರ ಪೌರೊಹಿತ್ಯ ವಹಿಸಿದ್ದರು.


ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಬಂಧುಗಳು, ಸ್ನೇಹಿತರು, ಆತ್ಮೀಯರು ಮತ್ತು ಸಮಾಜದ ಹಿರಿಯರು ಸಜನ್ ಭಂಡಾರಿ ದಂಪತಿಯ ಯಥೋಚಿತ ಸತ್ಕಾರ ಸ್ವೀಕರಿಸಿ ಶುಭ ಹಾರೈಸಿದರು.
ಶ್ರೀ ಸಜನ್ ಭಂಡಾರಿಯವರು ಕವತ್ತಾರು ಉಮೇಶ್ ಭಂಡಾರಿ ಮತ್ತು ಶ್ರೀಮತಿ ಶಾರದಾ ಉಮೇಶ್ ಭಂಡಾರಿ ದಂಪತಿಯ ಮಗ. ಇರ್ವತ್ತೂರು ಬಾಬಣ್ಣ ಭಂಡಾರಿ ಹಾಗೂ ಕವತ್ತಾರು ದೋಗ ಭಂಡಾರಿಯವರ ಮೊಮ್ಮಗ. ಶ್ರೀಮತಿ ಗೀತಾ ಸಜನ್ ಅವರು ಮುಂಬೈಯ ಶ್ರೀ ಶಾಂತರಾಮ್ ಮತ್ತು ಶ್ರೀಮತಿ ಶಶಿಕಲ ದಂಪತಿಯ ಮಗಳು. ಸಜನ್ ಮತ್ತು ಇವರ ಪತ್ನಿ ಶ್ರೀಮತಿ ಗೀತಾ ಇಬ್ಬರೂ ಬ್ಯಾಂಕ್ ನಲ್ಲಿ ಉದ್ಯೋಗಿಗಳಾಗಿದ್ದಾರೆ.

ನೂತನ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು, ಐಶ್ವರ್ಯವನ್ನು ದಯಪಾಲಿಸಲಿ,ನೂತನ ಮನೆಯು ಅವರಿಗೆ ಸುಖ, ಶಾಂತಿ, ನೆಮ್ಮದಿಯನ್ನು ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.

ಮಾಹಿತಿ : ಇರ್ವತ್ತೂರು ಗೋವಿಂದ ಭಂಡಾರಿ.ಕಾರ್ಕಳ.

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *