
ಸೊರಬ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕರಾಗಿರುವ ಕೆ. ಶಿವಪ್ಪ ಮತ್ತು ಶ್ರೀಮತಿ ಸುಮಾ ದಂಪತಿಯ ಪುತ್ರಿ ಎಸ್ ಸಮೀಕ್ಷಾ ರವರು ಇತ್ತೀಚಿಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ625 ಅಂಕ ಪಡೆದು ಶೇಕಡಾ 100% ಫಲಿತಾಂಶದೊಂದಿಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ .
ಇವರು ಹೊಸನಗರದ ಸೊನಲೆ ನಿವಾಸಿ ಷಣ್ಮುಖ ಭಂಡಾರಿ ಮತ್ತು ಸೊರಬ ತಾಲೂಕು ಮೂಡುಗೋಡು ಕೃಷ್ಣಪ್ಪ ಭಂಡಾರಿಯವರ ಮೊಮ್ಮಗಳು .
ಕುಮಾರಿ ಸಮೀಕ್ಷಾ ಸೊರಬದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುತ್ತಾರೆ .
ಸಮೀಕ್ಷಾ ರವರ ಸಾಧನೆ ಇಡೀ ಸಮಾಜಕ್ಕೆ ಹೆಮ್ಮೆ ತಂದಿದ್ದು ಅವರು ಶಿಕ್ಷಣದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಈ ಮೂಲಕ ಭವಿಷ್ಯದಲ್ಲಿ ಪೋಷಕರಿಗೆ ,ಸಮಾಜಕ್ಕೆ ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.