January 18, 2025
shivani

ಸ್ವಾಮಿ ವಿವೇಕಾನಂದರ 156 ನೇ ಜಯಂತಿ ಆಚರಣೆಯ ಪ್ರಯುಕ್ತ ಸಂವೇಧನಾ ಫೌಂಡೇಶನ್ ಹಮ್ಮಿ ಕೊಂಡಿರುವ ವಂದೇ ಮಾತರಂ ಆಲ್ಬಮ್ ಸಾಂಗ್ ಸ್ಪರ್ಧೆಯಲ್ಲಿ ಅದ್ಬುತ ಗುಣಮಟ್ಟದ ಆಲ್ಬಮ್ ಸಾಂಗ್ ತಯಾರಿಸಿರುವ ರಾಜೇಶ್ ಭಂಡಾರಿ ಕಲಾಂಜಲಿ ಕ್ರಿಯೇಷನ್ ಮತ್ತು ಉನ್ನತ ತಂತ್ರಜ್ಞಾನದ ಜೊತೆಗೆ ಬೇಬಿ. ಶಿವಾನಿ ಯವರ ಅದ್ಬುತ ಕಂಠ ಸಿರಿಯೊಂದಿಗೆ ಸುಂದರ ಆಲ್ಬಮ್ ಹಾಡು ತಯಾರಿಸಿರುವ ನವೀನ ಭಂಡಾರಿ ಶಿವಾನಿ ಮ್ಯೂಸಿಕಲ್ಸ್ ಕೊಪ್ಪ ಸ್ಪರ್ಧಾಕಣದಲ್ಲಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಮೊದಲ ಹಾಡಿಗೆ 2 ಲಕ್ಷ ರೂಪಾಯಿ ಮತ್ತು ಎರಡನೇ ಹಾಡಿಗೆ 1 ಲಕ್ಷ ರೂಪಾಯಿ ಬಹುಮಾನ ನಿಗದಿಪಡಿಸಲಾಗಿದೆ. ಅದ್ಬುತ ಹಾಡುಗಳ ಮೂಲಕ ಇಬ್ಬರು ಭಂಡಾರಿ ಕಲಾವಿದರು ಸ್ಪರ್ಧೆಗೆ ಅರ್ಹವಾದ ಹಾಡುಗಳನ್ನು ರಚಿಸಿದ್ದಾರೆ. ಈ ಹಾಡುಗಳು ಸಂವೇಧನಾ ಫೌಂಡೇಶನ್ ನ youtube ಚಾನೆಲ್ ನಲ್ಲಿ ಲಭ್ಯವಿದೆ. ಇದನ್ನು ವೀಕ್ಷಿಸುವ ಮೂಲಕ ಭಂಡಾರಿ ಕಲಾವಿದರನ್ನು ಪ್ರೋತ್ಸಾಹಿಸಿ ಮತ್ತು ಬಹುಮಾನ ಗಳಿಸಲು ಸಹಕರಿಸಿ .

ಕಲಾಂಜಲಿ ಕ್ರಿಯೇಷನ್ಸ್ ನ ವಂದೇ ಮಾತರಂ ಹಾಡು ವೀಕ್ಷಿಸಿ …

ಶಿವಾನಿ ಮ್ಯೂಸಿಕಲ್ಸ್ ನ ಶಿವಾನಿ ಹಾಡಿರುವ ವಂದೇ ಮಾತರಂ ಹಾಡು ವೀಕ್ಷಿಸಿ

ಶೇರ್ ಮಾಡುವ ಮೂಲಕ ಬೆಂಬಲಿಸಿ…..

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *