January 18, 2025
20181013_000746
ಶಿವಮೊಗ್ಗ ಜಿಲ್ಲೆ ಸೊರಬ ಕಾನಿಕೇರಿಯ ದಿವಂಗತ ಭುಜಂಗ ಭಂಡಾರಿ ಮತ್ತು ಶ್ರೀಮತಿ ಜಯಲಕ್ಷ್ಮಿ ಭುಜಂಗ ಭಂಡಾರಿ ದಂಪತಿಯ ಪುತ್ರಿ.
ಚಿ||ಸೌ|| ಸೌಮ್ಯ.

 

ಹಾಗೂ ಕಾರ್ಕಳ ತಾಲೂಕಿನ ನೀರೆ ಬೈಲೂರಿನ ಶ್ರೀ ಕುಟ್ಟಿ ಸಾಲಿಯಾನ ಮತ್ತು ಶ್ರೀಮತಿ ಲಲಿತಾ ಕುಟ್ಟಿ ಸಾಲಿಯಾನ ದಂಪತಿಯ ಪುತ್ರ.
ಚಿ|| ಸಂದೇಶ್.

ಇವರ ವಿವಾಹ ಮಹೋತ್ಸವವು ಅಕ್ಟೋಬರ್ 12 ರ ಶುಕ್ರವಾರ ಕಾರ್ಕಳ ತಾಲೂಕಿನ ಬೈಲೂರು,ಗೋವಿಂದೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕುಟುಂಬಸ್ಥರ,ಗುರುಹಿರಿಯರ,ಹಿತೈಷಿಗಳ ಸಮಕ್ಷಮದಲ್ಲಿ ಸಂಭ್ರಮದಿಂದ ನೆರವೇರಿತು.


ದಾಂಪತ್ಯ ಜೀವನಕ್ಕೆ ಪಾದಾರ್ಪಣೆಗೈದ ನವ ವಧುವರರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ, ಸುಖ ಶಾಂತಿ ನೆಮ್ಮದಿಯುತ ಜೀವನ ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.

 

ವರದಿ : ರಂಜನ್ ಜೋಗು ಭಂಡಾರಿ. ಶಿರಾಳಕೊಪ್ಪ.

Leave a Reply

Your email address will not be published. Required fields are marked *