January 18, 2025
shubhasandesh
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಶ್ರೀ ಕೆ.ಅನಂತರಾಮ ಬಂಗಾಡಿ ಮತ್ತು ಶ್ರೀಮತಿ ಸುಮತಿ ಅನಂತರಾಮ ಬಂಗಾಡಿಯವರ ಸುಪುತ್ರ…
ಚಿ|| ಸಂದೇಶ್ ಕುಮಾರ್.
ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿಯ ಜೀ ಲಕ್ಷ್ಮೀಪುರದ ಶ್ರೀ ಮಾಧು ಭಂಡಾರಿ ಮತ್ತು ಶ್ರೀಮತಿ ಮಮತಾ ಮಾಧು ಭಂಡಾರಿಯವರ ಸುಪುತ್ರಿ…
ಚಿ||ಸೌ|| ಶುಭ.
ಇವರ ಶುಭ ವಿವಾಹವು ಮೇ 2 ರ ಬುಧವಾರ ಬೆಳ್ತಂಗಡಿ ಗುರುವಾಯನಕೆರೆಯ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.

ಖ್ಯಾತ ಜ್ಯೋತಿಷಿಗಳು,ದೈವಾರಾಧಕರೂ,ಬರಹಗಾರರೂ,ಯಕ್ಷಗಾನ ಪ್ರಸಂಗ ಕತೃಗಳೂ ಆಗಿರುವ ಶ್ರೀ ಕೆ.ಅನಂತರಾಮ ಬಂಗಾಡಿಯವರ ಸುಪುತ್ರ ಶ್ರೀ ಸಂದೇಶ್ ಕುಮಾರ್ ಭಂಡಾರಿಯವರು ನಮ್ಮ ಭಂಡಾರಿವಾರ್ತೆ ಅಂತರ್ಜಾಲ ಪತ್ರಿಕೆಯ ಸಹ ಸಂಪಾದಕರೂ ಆಗಿದ್ದಾರೆ.

ವಿವಾಹ ಮಹೋತ್ಸವದಲ್ಲಿ ಉಪಸ್ಥಿತರಿದ್ದ ಕುಟುಂಬಸ್ಥರು, ಬಂಧು ಮಿತ್ರರು,ಸಹೋದ್ಯೋಗಿಗಳು, ಆತ್ಮೀಯರು ಮತ್ತು ಭಂಡಾರಿವಾರ್ತೆಯ ಎಲ್ಲಾ ಸದಸ್ಯರು ನವ ವಧುವರರಿಗೆ ಶುಭ ಹಾರೈಸಿದರು.

ನವ ಬಾಳಿನ ಹೊಸ್ತಿಲಲ್ಲಿ ನಿಂತಿರುವ ನವ ಜೋಡಿಯ ಎಲ್ಲಾ ಕನಸುಗಳನ್ನು ಭಗವಂತನು ಈಡೇರಿಸಲಿ,ಅವರ ಬಾಳಲ್ಲಿ ಸುಖ ಶಾಂತಿ ನೆಮ್ಮದಿಯ ಹೊಳೆ ತುಂಬಿ ಹರಿಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ನೂತನ ವಧುವರರಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

— ಭಂಡಾರಿವಾರ್ತೆ.

1 thought on “ಬಂಗಾಡಿಯ ಸಂದೇಶ್ ಕುಮಾರ್ ಮತ್ತು ಗೋಣಿಬೀಡುವಿನ ಶುಭ ವಿವಾಹ ಸಂಭ್ರಮ.

Leave a Reply

Your email address will not be published. Required fields are marked *