January 18, 2025
WhatsApp Image 2022-05-19 at 5.58.54 PM

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸ್ಮಠ ದ ಶ್ರೀ ಸುರೇಂದ್ರ ಭಂಡಾರಿ ಮತ್ತು ಶ್ರೀಮತಿ ರಮ್ಯಾ ಸುರೇಂದ್ರ  ಭಂಡಾರಿ ದಂಪತಿಯ   ಪುತ್ರ ಸನ್ಮಾನ್  ಭಂಡಾರಿಯವರು 2021-22 ರ ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ 612 (98%) ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ  ಗುರುಗಳ ವಿದ್ಯಾಸಂಸ್ಥೆಯ ಊರಿನ ಮತ್ತು ಷೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಸನ್ಮಾನ್  ಭಂಡಾರಿ  ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರಕಾರಿ ಪ್ರೌಢ ಶಾಲೆ ಕೆದೂರು ಇಲ್ಲಿಯ ವಿದ್ಯಾರ್ಥಿ.  ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು ಇವರ ಸಾಧನೆಯನ್ನು ಶ್ಲಾಘಿಸುತ್ತಾ , ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *