ತುಲುವರು ಹಲಸಿನ ಕಾಯಿಯ ಹೊರ ಮೈಯಲ್ಲಿ ಗಜ್ಜಿ ತರಹದ ಮುಳ್ಳುಗಳನ್ನು ಕಂಡು ಗುಜ್ಜೆ ಎಂದು ಕರೆದರು. ಹಣ್ಣುಗಳಲ್ಲೇ ಇದು ಗಾತ್ರದಲ್ಲಿ ದೊಡ್ಡದು. ಗಾತ್ರ ನೋಡಿ ಪೆರ(ದೊಡ್ಡ)ಕಾಯಿ ಎಂದರು. ತುಲು ಭಾಷೆಯಲ್ಲಿ ಅಕ್ಷರಗಳನ್ನು ಹಿಂದೆ ಮುಂದೆ ಮಾಡಿ ಉಚ್ಛಾರ ಮಾಡುವುದು ಹಿಂದಿನಿಂದ ಬಂದಿದ್ದರಿಂದ ಪೆರಕಾಯಿಯನ್ನು ಪೆಲಕಾಯಿ ಎಂದು ಕರೆಯುತ್ತಾ ಬಂದರು. ಪೆಲಕಾಯಿಯ ಮೂಲ ಅಥವಾ ಸೆಂಟರ್ ಭಾಗವೇ ಗೂಂಜಿ. ಗುಜ್ಜೆಯ ಒಳಮೈಯ ಆರಂಭದ ಭಾಗದಲ್ಲಿ ರಚ್ಚೇವು ಕೆಸು ದಂಡಿನ ಮೃದುತ್ವ ಕಂಡು ರಚ್ಚೇ ಎಂದು ಕರೆದರು. ಈ ರಚ್ಚೇಯಲ್ಲಿ ಬೆಳೆದು ನಿಂತ ಬಿದಿರಿನ ಚಿಗುರು ಅಥವಾ ಮೊಗ್ಗು ತರಹದ ಕನಿಲೆ| ಕಳಲೆಯಂತಿರುವ ಭಾಗವನ್ನು “ಕನ್ನಿರ್”ಎಂದರು. ಇದೇ ಕನ್ನಿರ್ ಅಥವಾ ಕನ್ನಿಲ್ ಒಳಗೆ “ಪಚ್ಚೀರ್|ಪಚ್ಚೀಲ್” ಬೆಳೆಯುತ್ತದೆ. ಪಚ್ಚಿ(ಪಕ್ಕಿ|ಪಕ್ಷಿ)ಇಲ್ಲ್ ಪಚ್ಚಿಲ್|ಪಚ್ಚಿರ್ ಎಂದರು. ಪಚ್ಚಿಲ್|ಪಚ್ಚಿರ್ ಎಂದರೆ ಹಲಸಿನ ತೊಳೆ|ಸೊಳೆ ಆಗಿರುತ್ತದೆ. ಈ ತೊಳೆ ವಿನ್ಯಾಸವು ಹಕ್ಕಿ ಗೂಡು ತರಹ ಕಂಡಿದೆ.
(ಹಲಸಿನ ಹಣ್ಣು ತಿಂದರೆ ಹೊಟ್ಟೆ ತುಂಬುತ್ತದೆ)
(ರಚ್ಚೇವು ಕೆಸು ದಂಡಿನಂತೆ ಮೃದುತ್ವವನ್ನು ಪಡೆದ ರಚ್ಚೆ)
(ಕನ್ನಿಲ್ ಒಳಗೆ ಬಂಧಿತ ಪಕ್ಷಿ ಗೂಡಿನಂತಿರುವ ಪಚ್ಚಿಲ್)
(ಗರ್ಭಿಣಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನ ವಿನ್ಯಾಸ. ಪೊದಿಕೆ ಮತ್ತು ನೂಲು ಪೊದುಂಕುಲು)
(ಗರ್ಭ ಕೋಶದಿಂದ ಹೊರ ಬಂಧ ಮಗುವಿನ ಚಿತ್ರ)
(ಬೇಯಿಸಿ ಒಣಗಿಸಿದ -ಸಂತಾನಿ ಮತ್ತು ಬೇಯಿಸದೆ ಒಣಗಿಸಿದ ಸಂತಾನಿ. ಹಸಿ ಪೆಲತ್ತರಿ ಶುಭ್ರವಾಗಿ ಬಿಳಿ ವರ್ಣದವು)
(ಬೇಯಿಸಿ ಒಣಗಿಸಿದ ಸಾಂತನಿ ಮತ್ತು ಬೇಯಿಸದೆ ಹಸಿ ಒಣಗಿಸಿದ ಸಾಂತನಿ ಕುಟ್ಟಿ ಪುಡಿ ಮಾಡಿ ಕುದಿಸಿದ ಮನ್ನಿ ಅಥವಾ ತಂಬುಲಿ)
(ಅರಿ-ಪೆಲತ್ತರಿ. ಅಕ್ಕಿ ಮತ್ತು ದೊಡ್ಡ ಅಕ್ಕಿ)
(ಬೇಯಿಸಿ ಒಣಗಿಸಿದ ಸಾಂತನಿ ಮತ್ತು ಹಸಿ ಒಣಗಿಸಿದ ಸಾಂತನಿ. ಇವರಡನ್ನೂ ನೀರಿನಲ್ಲಿ ಹಾಕಿ ಕೆಲವು ಗಂಟೆಗಳ ಬಳಿಕ ತಮ್ಮ ಮೂಲ ರೂಪವನ್ನು ಪಡೆಯುತ್ತದೆ)
(ಒಣಗಿದ ಹಸಿ ಪೆಲತ್ತರಿಯನ್ನು ನೀರಿನಲ್ಲಿ ನೆನೆ ಹಾಕಿದಾಗ ಗಾಯವಾದ ಪೆಲತ್ತರಿಯಲ್ಲಿ ರಿಲೀಸ್ ಆದ ಬಿಳಿ ಅಂಶಗಳು)
ಈ ಪಚ್ಚೀಲ್ ಒಳಗೆ ಮರಿ ಇರುವಂತೆ ಹೊದಿಕೆ ಪೊದುಂಕುಲ್ ಕಂಡರು. ಪೊದುಂಕುಲ್ ಕೆಳಗೆ ದಾರವನ್ನು ಕಂಡು ಆಗ ತಾನೇ ಜನಿಸಿದ ಮಗುವಿನ ಹೊಕ್ಕುಳ ಬಳ್ಳಿ ಎಂದರು. ಪೊದಿಕೆ ಮತ್ತು ನೂಲು ಪದಗಳು ಸೇರಿಯೇ ಪೊದುಂಕುಲ್ ಆಯಿತು. ಪೊದುಂಕುಲ್ ಸಮೇತವಾಗಿ ಒಳಗೆ ಇರುವ ಹಲಸಿನ ಬೀಜವನ್ನು ಗರ್ಭಿಣಿಯ ಗರ್ಭ ಕೋಶದಲ್ಲಿ ಇರುವ ಮಗುವಿನಂತೆ ಕಂಡರು. ಬಾಲೆ ಬೋಲೆ ಎಂದು ಕರೆದರು. ಆಗ ತಾನೇ ಹೆತ್ತ ಮಗುವಿನ ವಿನ್ಯಾಸ ಕಂಡರು. ತುಲು ಭಾಷೆಯಲ್ಲಿ ಬಾಲೆ ಎಂದರೆ ಮಗು ಎಂಬ ಅರ್ಥವಾಗಿದೆ.
ಬಾಲೆ ಬೋಲೆಯನ್ನು ಪೆಲತ್ತರಿ ಎಂತಲೂ ಕರೆದರು. ಅರಿ ಎಂದರೆ ತುಲು ಭಾಷೆಯಲ್ಲಿ ಅಕ್ಕಿ ಆಗಿರುತ್ತದೆ. ಪೆಲತ್ತರಿ ಎಂದರೆ ದೊಡ್ಡ ಅಕ್ಕಿ ಎಂಬ ಅರ್ಥ. ಹಲಸಿನ ಬೀಜ ಮತ್ತು ಅಕ್ಕಿಯ ವಿನ್ಯಾಸ ಒಂದೇ ಸಮನೆ ಕಂಡಿತು. ಗಾತ್ರದಲ್ಲಿ ಮಾತ್ರ ದೊಡ್ಡದು ಸಣ್ಣದು ಆಗಿರುತ್ತದೆ. ಪೆಲತ್ತರಿಯನ್ನು ಫಲ ಕೊಡುವ ಬೀಜ ಎಂತಲೂ ಅರ್ಥೈಸಿದರು. ಪುರುಷರ ಬೀಜವನ್ನು ಅರಿ ಎಂದು ಈಗಲೂ ಕರೆಯುತ್ತಾರೆ. ಅಕ್ಕಿ, ಬಿದಿರಿನ ಅಕ್ಕಿ ಮತ್ತು ಪುರುಷರ ಬೀಜ ಇವುಗಳನ್ನು ತುಲು ಭಾಷೆಯಲ್ಲಿ “ಅರಿ” ಎಂದು ಕರೆಯುತ್ತಾರೆ. ಹಲಸಿನ ಬೀಜದಿಂದ ಸಂತಾನಆಗುತ್ತದೆ. ಬಾಲೆ(ಮಗು)ಆಗುತ್ತದೆ ಎಂದು ತುಲುವರು ಆದಿಯಲ್ಲೇ ಅರಿತಿದ್ದರು. ಅರಿ, ಪೆಲತ್ತರಿ,ಬಿದಿರಿನ ಅರಿ ಎಲ್ಲವೂ ಬೇಗನೆ ಕರಗುವ ಜೀರ್ಣ ಆಗುವ ವಸ್ತುಗಳು. ಹಸಿವನ್ನು ನೀಗಿಸುವವು.
ಹಲಸಿನ ಬೀಜವನ್ನು ಬೇಯಿಸಿ ಒಣಗಿಸಿ ತಿಂದಿದ್ದಾರೆ. ಇದನ್ನು ಸಂತಾನ ಸಂತಾನಿ ಸಾಂತನಿ ಎಂದು ಕರೆಯುತ್ತಾ ಬಂದಿದ್ದಾರೆ.ಇನ್ನು ತಡವೇಕೆ?ಸಂತಾನ ಭಾಗ್ಯ ಇಲ್ಲದವರು ಆದಷ್ಟು ಹಲಸಿನ ಎಲ್ಲಾ ಉತ್ಪನ್ನಗಳನ್ನು ತಿನ್ನಬಹುದು.ಎಣ್ಣೆಯಲ್ಲಿ ಕರಿದ ಇದರ ಉತ್ಪನ್ನಗಳು ಬೇಡವೇ ಬೇಡ.ಏಕೆಂದರೆ ಅದರಲ್ಲಿರುವ ಅಂಶವು ಮಾಯ ವಾಗುತ್ತದೆ. ಸಂತಾನ ಬೀಜ ಎಂದರೆ “ಸಾಂತನಿ”ಎಂದು ತಿರುಚಿ ಉಚ್ಛಾರಣೆ ಮಾಡಿದ್ದಾರೆ. ಬೇಯಿಸಿ ಒಣಗಿದ ಪೆಲತ್ತರಿಯು ಮಾತ್ರ ಸಾಂತನಿ ಎಂದು ನಾವೆಲ್ಲ ಭಾವಿಸುತ್ತೇವೆ.ಆದರೆ ಬೇಯಿಸದ ಹಸಿ ಪೆಲತ್ತರಿಯನ್ನು ಒಣಗಿಸಿದರೂ ಅದರ ಸ್ವರೂಪವೂ ಬೇಯಿಸಿದ ಪೆಲತ್ತರಿಯಂತೆ ಗಟ್ಟಿಯಾಗಿ ಕಠಿಣವಾಗಿರುತ್ತದೆ.ಇವರಡೂ ಪೆಲತ್ತರಿಯನ್ನು ಕುಟ್ಟಿ ಪುಡಿ ಮಾಡಿದರೆ ಒಣಗಿಸಿದ ಹಸಿ ಪೆಲತ್ತರಿಯ ಚೂರ್ಣವು ಹೆಚ್ಚು ಶುಭ್ರವಾಗಿ ಬಿಳಿಯಾಗಿ ಕಾಣಿಸುತ್ತದೆ.ಇವೆರಡರಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ಎಂದು ತಿಳಿಯಬೇಕು.ಈ ಚೂರ್ಣಗಳನ್ನು ಬೇರೆ ಬೇರೆಯಾಗಿ ಕುದಿಸಿದಾಗ ಬೆಂದ ಸಾಂತನಿಯ ತಂಬುಳಿಯು ಪೇಸ್ಟ್ ರೂಪಕ್ಕೆ ತಾಳುವುದಿಲ್ಲ.ಅಷ್ಟೇನು ಶುಭ್ರವಾಗಿ ಬಿಳಿ ರೂಪ ತಾಳುವುದಿಲ್ಲ.ಆದರೆ ಹಸಿ ಸಾಂತನಿಯ ಚೂರ್ಣಗಳನ್ನು ಕುದಿಸಿದಾಗ ಬೇಗನೆ ತಂಬುಳಿಯು ಪೇಸ್ಟ್ ರೂಪದಲ್ಲಿ ಕಾಣುತ್ತದೆ.ಬಿಳಿಯ ಬಣ್ಣಕ್ಕೆ ತಿರುಗಿ ಶುಭ್ರವಾಗಿ ಕಾಣುತ್ತದೆ.
ಹಸಿ ಪೆಲತ್ತರಿಯನ್ನು ಚೆನ್ನಾಗಿ ಒಣಗಿಸಿ ಸಾಂತನಿಯ ರೂಪಕ್ಕೆ ತರಬೇಕು. ಇಲ್ಲಿ ಸೂರ್ಯನ ಸಂಪರ್ಕ ಪೆಲತ್ತರಿ ಮೇಲೆ ಬೀರುತ್ತದೆ. ತದನಂತರ ಈ ಸಾಂತನಿಯ ಸಿಪ್ಪೆ ಸುಲಿದು ಕುಟ್ಟಿ ಪೌಡರ್ ರೂಪಕ್ಕೆ ತರಬೇಕು. ಬೇನೆ ಮರದ ಅಥವಾ ಈಂದ್ ಮರದ ಪುಡಿಯಂತೆ ಇದರ ಪುಡಿ ಕಾಣುತ್ತದೆ. ಬಳಿಕ ಈ ಪುಡಿಯನ್ನು ಈಂದ್ ಪುಡಿ ಕುದಿಸಿದಂತೆ ಕುದಿಸ ಬೇಕು. ಪೆಲತ್ತರಿ ತಂಬುಳಿಯು ಬಿಳಿ ರೂಪದಲ್ಲಿ ಕಾಣುತ್ತದೆ. ಇದಕ್ಕೆ ರುಚಿಗೆ ಸಾಕಷ್ಟು ಉಪ್ಪು ಹಾಕಿ ಸೇವಿಸುವುದು. ಬೇಯಿಸಿದ ಪೆಲತ್ತರಿ ಸಾಂತನಿಯಲ್ಲಿ ಸಂತಾನಿ ಅಂಶವು ನೀರಿನೊಡನೆ ಹೋಗುವುದರಿಂದ ಹಸಿ ಪೆಲತ್ತರಿ ಸಾಂತನಿಯು ಹೆಚ್ಚು ಪರಿಣಾಮಕಾರಿ ಎಂದು ನನ್ನ ಚಿಂತನೆ.
ಕಠಿಣ ಗಟ್ಟಿಯಾದ ಬೇಯಿಸಿದ ಸಾಂತನಿ ಮತ್ತು ಹಸಿ ಸಾಂತನಿಗಳನ್ನು ನೀರಿನಲ್ಲಿ ಹಾಕಿದರೆ ಕೆಲವು ಗಂಟೆಗಳ ಬಳಿಕ ಅವುಗಳು ತಮ್ಮ ಮೂಲ ಸ್ವರೂಪವನ್ನು ತಾಳುತ್ತವೆ. ಬೇಯಿಸಿದ ಮತ್ತು ಹಸಿಯಾದ ಪೆಲತ್ತರಿಯಂತೆ ಕಾಣಬಹುದು. ಅಂದರೆ ಮೃದುತ್ವ ಸ್ವರೂಪವನ್ನು ತಾಳುತ್ತೆ. ನಮ್ಮ ತುಲುವ ಪೂರ್ವಜರು ಹಲಸಿನ ಹಣ್ಣು,ಬೀಜಗಳಲ್ಲಿ ಇರುವ ಮಹತ್ತರವಾದ ರಹಸ್ಯವನ್ನು ತುಲು ಭಾಷೆಯಲ್ಲಿ, ವಿನ್ಯಾಸಗಳಲ್ಲಿ, ಹೆಸರುಗಳಲ್ಲಿ ತಿಳಿಸಿದ್ದಾರೆ. ಸರ್ವ ಕಾಯಿಲೆಗಳಿಗೆ ದಿವ್ಯ ಔಷಧ ಎಂಬ ಮಾಹಿತಿಯನ್ನು ನೀಡಿರುವುದು ಕಂಡುಬರುತ್ತದೆ. ಅವುಗಳನ್ನು ನಾನು ಇಲ್ಲಿ ವ್ಯಕ್ತ ಪಡಿಸಿದ್ದೇನೆ.ಬಂಜೆತನಕ್ಕೆ ಔಷಧೀಯನ್ನಾಗಿ ಬಳಸಿದರೆ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ.
ಸಾಂತನಿ ಎಂದರೆ ಬೇಯಿಸಿದ ಪೆಲತ್ತರಿನಾ ಅಥವಾ ಹಸಿ ಪೆಲತ್ತರಿನಾ ಎಂಬ ಸ್ಪಷ್ಟತೆ ಇಲ್ಲದೆ ಇರುವುದರಿಂದ ನಾನು ಹಸಿ ಪೆಲತ್ತರಿಯು ಹೆಚ್ಚು ಪರಿಣಾಮಕಾರಿ ಎಂದು ಚಿಂತಿಸಿ ತಿಳಿಸಿದ್ದೇನೆ. ಬೇಯಿಸಿದಾಗ ಸಂತಾನದ ಅಂಶವು ನಾಶ ಆಗುತ್ತದೆ. ಹಸಿ ಬೀಜ ಪುಡಿ ಮಾಡಿ ಕುದಿಸಿ ಸೇವಿಸಿದರೆ ಇದರ ಸಂತನೋತ್ಪತ್ತಿಯ ಅಂಶವು ಪೂರ್ತಿ ಆಗಿ ಸಿಗುತ್ತದೆ. ಒಟ್ಟಿನಲ್ಲಿ ಹಲಸಿನ ಎಲ್ಲಾ ಭಾಗಗಳಲ್ಲಿ ಸಂತಾನಿ ಅಂಶಗಳು ಧಾರಾಳವಾಗಿದೆ ಎಂದು ಪೂರ್ವಜರು ಅರಿತು ತಿಳಿಸಿದ್ದಾರೆ. ಅಗತ್ಯ ಇದ್ದವರು ನಮ್ಮ ಪೂರ್ವಿಕರು ತಿಳಿಸಿದ ರಹಸ್ಯವನ್ನು ಪರೀಕ್ಷೆಗೆ ಒಳಪಡಿಸಬಹುದು.