January 18, 2025
WhatsApp Image 2021-09-12 at 21.03.04

ಬಂಟ್ವಾಳ ತಾಲೂಕಿನ ಸರಪಾಡಿ ನಿವಾಸಿ, ಗಣೇಶ್ ಬೀಡಿ ಗುತ್ತಿಗೆದಾರ ಜನಾರ್ದನ ಭಂಡಾರಿ(60)ಅವರು ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 12ರಂದು ಮುಂಜಾನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.


ನಾಟಕ ರಚನೆಗಾರರಾಗಿದ್ದ ಜನಾರ್ದನ ಭಂಡಾರಿ ಹವ್ಯಾಸಿ ಕಲಾವಿದರಾಗಿದ್ದರು. ಉತ್ತಮ ವಾಲಿಬಾಲ್ ಆಟಗಾರರಾಗಿದ್ದರು. ದೈವಸ್ಥಳ ಯುವಕ ಮಂಡಲ, ಮುಲ್ಕಾಜೆಮಾಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸರಪಾಡಿ ಘಟಕದ ಸಕ್ರಿಯ ಸದಸ್ಯರಾಗಿದ್ದರು. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು .

ಇವರು ಪತ್ನಿ ಶ್ರೀಮತಿ ಶಾಂತಾ ಮತ್ತು ಮೂರು ಮಂದಿ ಪುತ್ರರಾದ ಉದಯವಾಣಿ ಪತ್ರಿಕೆಯ ವರದಿಗಾರಾದ ಕಿರಣ್ ಸರಪಾಡಿ , ಕಿಶನ್ , ಕೀರ್ತನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ .

ಜನಾರ್ಧನ ಭಂಡಾರಿ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಿ ಪತ್ನಿ ಮಕ್ಕಳಿಗೆ ಇವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಭಂಡಾರಿ ಕುಟುಂಬ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *