January 18, 2025
WhatsApp Image 2021-08-16 at 20.07.04

ಬಂಟ್ವಾಳ ದಿವಂಗತ ತಿಮ್ಮಪ್ಪ ಭಂಡಾರಿ ಮತ್ತು ದಿವಂಗತ ಗಿರಿಜಾ ಭಂಡಾರಿ ದಂಪತಿಯ ಪುತ್ರಿ ಹಾಗೂ ಬೆಂಗಳೂರು ಬನಶಂಕರಿ ದಿವಂಗತ ಭೋಜ ಭಂಡಾರಿ ಪಾಂಗಾಳ ಅವರ ಧರ್ಮಪತ್ನಿ ಶ್ರೀಮತಿ ಸರೋಜಿನಿ ಬೋಜ ಭಂಡಾರಿ ( 68 ವರ್ಷ ) ಇವರು ಮುಂಬಯಿಯ ವಸಾಯಿ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಆಸೌಖ್ಯ ಚಿಕಿತ್ಸೆ ಪಡೆಯುತ್ತಿದ್ದು ಆದರೆ ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 16.08.2021 ನೇ ಸೋಮವಾರದಂದು ಮುಂಜಾನೆ ವಿಧಿವಶರಾದರು .

ಪುತ್ರಿ ಶ್ರೀಮತಿ ಸವಿತಾ ವೇಣುಗೋಪಾಲ್ ವಸಾಯಿ ಮುಂಬಯಿ ಪುತ್ರರಾದ ಶ್ರೀ ಸಂಜನ್ ಭಂಡಾರಿ ಬೆಂಗಳೂರು ಮತ್ತು ಶ್ರೀ ರಂಜನ್ ಭಂಡಾರಿ ಬೆಂಗಳೂರು ಹಾಗೂ ಸಹೋದರರಾದ ಶ್ರೀ ಆನಂದ ಭಂಡಾರಿ ಬಂಟ್ವಾಳ , ಶ್ರೀ ಗಣೇಶ್ ಭಂಡಾರಿ ಮಲಾಡ್ ಮುಂಬಯಿ ಸಹೋದರಿಯರಾದ ಶ್ರೀಮತಿ ಸುಮತಿ ಸುಂದರ ಭಂಡಾರಿ ಘಾಟ್ಕೋಪರ್ ಮುಂಬಯಿ , ಶ್ರೀಮತಿ ಲಲಿತಾ ಕೃಷ್ಣಪ್ಪ ಭಂಡಾರಿ ಯೆಯ್ಯಾಡಿ ಮಂಗಳೂರು , ಶ್ರೀಮತಿ ಇಂದಿರಾ ಆನಂದ ಭಂಡಾರಿ ಕದ್ರಿ ಮಂಗಳೂರು ,ಶ್ರೀಮತಿ ಗೀತಾ ವಿಠಲ ಭಂಡಾರಿ ಕುತ್ಯಾರು ಮಂಗಳೂರು ಮತ್ತು ಅಳಿಯ , ಸೊಸೆ , ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಮಕ್ಕಳು ಮತ್ತು ಕುಟುಂಬಸ್ಥರಿಗೆ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *