
ಮೊದಲಿಗೆ ಚಿಕನ್ ವಿಂಗ್ಸ್ ಅನ್ನು ಕಾರ್ನ್ ಫ್ಲೋರ್, ಕಾಳು ಮೆಣಸಿನ ಪುಡಿ, ಉಪ್ಪು, ಸೋಯಾ ಸಾಸ್, ಮೊಸರು, ನಿಂಬೆ ರಸ ಹಾಗೂ ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಇಡಿ ರಾತ್ರಿ ಅಥವಾ ಕನಿಷ್ಠ ಒಂದೆರಡು ಗಂಟೆಗಳ ಕಾಲ ನೆನೆಸಿಡಿ.

ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಇರಿಸಿ ನೆನೆಸಿಟ್ಟ ಚಿಕನ್ ವಿಂಗ್ಸ್ ಗಳನ್ನು ಕರಿದಿಡಿ.
ನಂತರ ಒಂದು ಪಾತ್ರೆಗೆ ಈರುಳ್ಳಿ ಹೂವು, ಒಂದು ಟೀ ಚಮಚ ಸೋಯಾ ಸಾಸ್, ಎರಡು ಟೇಬಲ್ ಚಮಚ ಸೀಸ್ವಾನ್ ಸಾಸ್, ಒಂದು ಟೀ ಚಮಚ ವಿನಿಗರ್, ಸ್ವಲ್ಪ ಸಕ್ಕರೆ ಮತ್ತು ಸ್ವಲ್ಪ ಉಪ್ಪು ಹಾಕಿ ಕಲಸಿ.

ಒಲೆಯ ಮೇಲೆ ಒಂದು ಕಡಾಯಿ ಇಟ್ಟು ಅದು ಕಾದ ನಂತರ ಎರಡು ಟೇಬಲ್ ಚಮಚ ಎಣ್ಣೆಯನ್ನು ಹಾಕಿ. ಕರಿದ ಚಿಕನ್ ವಿಂಗ್ಸ್ ಗಳನ್ನು ಮೇಲೆ ತಯಾರಿಸಿದ ಮಿಶ್ರಣದಲ್ಲಿ ಅದ್ದಿ ಕಾದಿರುವ ಎಣ್ಣೆಯಲ್ಲಿ ಹಾಕಿ ೨-೩ ನಿಮಿಷಗಳ ಕಾಲ ತಿರುಗಿಸಿ.
ಕೊನೆಗೆ ಈರುಳ್ಳಿ ಹೂವು ಹಾಕಿ ಅಲಂಕರಿಸಿ.
✍🏻: Disha Kishan Karkal