
ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತಿ ವರ್ಷ ರಥಸಪ್ತಮಿಯ ಶುಭ ದಿನದಂದು ಶ್ರೀ ಸವಿತಾ ಮಹರ್ಷಿಗಳ ಜಯಂತ್ಯುತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದ್ದು ಆ ಪ್ರಯುಕ್ತ ಫೆಬ್ರವರಿ 12,2019 ರ ಮಂಗಳವಾರ ಮೂಡಿಗೆರೆಯ “ಜೇಸಿ ಭವನ” ದಲ್ಲಿ ಮೂಡಿಗೆರೆ ತಾಲೂಕು ಸವಿತಾ ಸಮಾಜದ ಬಂಧುಗಳು ಸರ್ಕಾರದ ವಿವಿಧ ಇಲಾಖಾ ಅಧಿಕಾರಿಗಳ ಸಹಯೋಗದೊಂದಿಗೆ ಶ್ರೀ ಸವಿತಾ ಮಹರ್ಷಿಗಳ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.


ಶ್ರೀ ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆಯೊಂದಿಗೆ ವೇದಿಕೆಯ ಕಾರ್ಯಕ್ರಮವನ್ನು ಆರಂಭಿಸಲಾಯಿತು.ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಎಂ. ಪಿ. ಕುಮಾರಸ್ವಾಮಿಯವರ ಅನುಪಸ್ಥಿತಿಯಲ್ಲಿ ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಸನ್ಮಾನ್ಯ ಅಧ್ಯಕ್ಷರಾದ ಶ್ರೀ ಕೆ.ಸಿ.ರತನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಆರಂಭಗೊಂಡಿತು.ಮೂಡಿಗೆರೆ ತಾಲ್ಲೂಕಿನ ರಾಜ್ಯ ವಿಭಾಗೀಯ ಕಾರ್ಯದರ್ಶಿ ಶ್ರೀ ವಿ.ಪಿ. ನಾರಾಯಣ್ ಸವಿತಾ ಮಹರ್ಷಿಗಳ ಬಗ್ಗೆ ಉಪನ್ಯಾಸ ನೀಡಿದರು.



ವೇದಿಕೆಯ ಮೇಲೆ ಮೂಡಿಗೆರೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ರಮೀಜಾಭಿ, ಮಾನ್ಯ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ರಮೇಶ್, ಪಟ್ಟಣ ಪಂಚಾಯಿತಿ ಮೂಡಿಗೆರೆಯ ಮತ್ತೊಬ್ಬ ಉಪಾಧ್ಯಕ್ಷರಾದ ಶ್ರೀಮತಿ ನಯನ ಲೋಕಪ್ಪ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸುಂದರ್ ಕುಮಾರ್, ಸವಿತಾ ಸಮಾಜ ಮೂಡಿಗೆರೆಯ ಅಧ್ಯಕ್ಷರಾದ ಶ್ರೀ ಎಚ್. ಎಂ. ಲೋಕೇಶ್, ಮೂಡಿಗೆರೆ ಮಹಿಳಾ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಭುವನೇಶ್ವರಿ ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯರು, ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.



ಈ ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಕಾರ್ಯಕಾರಿ ಮಂಡಳಿ ಮತ್ತು ಸವಿತಾ ಸಮಾಜದ ಮಹಿಳಾ ಘಟಕದ ಸರ್ವಸದಸ್ಯರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಪಿ.ಎಸ್. ನಾರಾಯಣ್. ಉಪ ನೋಂದಣಾಧಿಕಾರಿ ಮೂಡಿಗೆರೆ ತಾಲ್ಲೂಕು ಕಚೇರಿ, ಶ್ರೀ ರವಿಕುಮಾರ್. ಜೂನಿಯರ್ ಎಂಜಿನಿಯರ್ ಮೆಸ್ಕಾಂ, ಜನ್ನಾಪುರ. ಶ್ರೀ ಎಂ.ಕೆ. ಷಣ್ಮುಖಾನಂದ ಭಂಡಾರಿ. ಮಾನ್ಯ ಪಟ್ಟಣ ಪಂಚಾಯಿತಿ ಸದಸ್ಯರು ಮೂಡಿಗೆರೆ, ಶ್ರೀಮತಿ ಶಕುಂತಲಾ ಮಲ್ಲಿಕಾರ್ಜುನ. ಸದಸ್ಯರು ಹಂತೂರು ಗ್ರಾಮ ಪಂಚಾಯಿತಿ, ಮೂಡಿಗೆರೆ, ಶ್ರೀ ರಂಗಸ್ವಾಮಿ ಸವಿತಾ ಸಮಾಜದ ಮಾಜಿ ಉಪಾಧ್ಯಕ್ಷರು, ಮೂಡಿಗೆರೆ, ಇವರುಗಳನ್ನು ಸನ್ಮಾನಿಸಲಾಯಿತು. ಜೊತೆಗೆ ಭಂಡಾರಿವಾರ್ತೆಯ ವರದಿಗಾರರಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀಮತಿ ಪವಿತ್ರಾ ಕರಂಬಳ್ಳಿಯವರನ್ನು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಉದ್ಘಾಟಕರು,ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷರು, ಮುಖ್ಯ ಅತಿಥಿಗಳು, ಸನ್ಮಾನಿತರು ಮತ್ತು ವೇದಿಕಾ ಕಾರ್ಯಕ್ರಮದ ಅಧ್ಯಕ್ಷರು ಸಮಾಜದ ಬಾಂಧವರನ್ನು ಉದ್ದೇಶಿಸಿ ಮಾತನಾಡಿದರು.





ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಮಂಗಳವನ್ನು ಹಾಡಲಾಯಿತು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸವಿತಾ ಸಮಾಜ ಬಾಂಧವರೆಲ್ಲರಿಗೂ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.

ವರದಿ : ಪವಿತ್ರ ಭಂಡಾರಿ ಕರಂಬಳ್ಳಿ.
ವಿ.ಎಮ್.ನಗರ.ಉಡುಪಿ.