
ಸವಿತಾ ಸಮಾಜದ ಹಿರಿಯರು ಬೆಂಗಳೂರಿನ ಅತ್ತಿಗುಪ್ಪೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎಂ ಬಿ ಶಿವಪ್ಪರವರು ನವೆಂಬರ್ 18 ರ ಗುರುವಾರದಂದು ಅಕಾಲಿಕವಾಗಿ ನಿಧನರಾದರು. ಅವರಿಗೆ ಸುಮಾರು ವರ್ಷ 58 ವಯಸ್ಸಾಗಿತ್ತು.
ಸಮಾಜಮುಖಿ ವ್ಯಕ್ತಿಯಾಗಿದ್ದ ಎಂ ಬಿ ಶಿವಪ್ಪರವರು ಸವಿತಾ ಸಮಾಜದ ಧ್ವನಿಯಾಗಿ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ, ಬಿಬಿಎಂಪಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಮೃತರು ಪತ್ನಿ ಮತ್ತು ಒಬ್ಬ ಮಗ, ಒಬ್ಬರು ಮಗಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ದಿವಂಗತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ , ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ವಾರ್ತೆ ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
–ಭಂಡಾರಿ ವಾರ್ತೆ