

“ಸಯಜ್ಞಾ”
ನಿಲಯದ ಗೃಹ ಪ್ರವೇಶ ಏಪ್ರಿಲ್ 27 ರ ಶುಕ್ರವಾರದ ಶುಭ ಮುಹೂರ್ತದಲ್ಲಿ ಶ್ರೀ ವೈಭವ ಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ಸಮಾಜದ ಬಂದುಗಳು, ಗುರು ಹಿರಿಯರು ಜನ ಪ್ರತಿನಿಧಿಗಳು, ಹಿತೈಷಿಗಳು,ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು. ಆಗಮಿಸಿದ ಅತಿಥಿಗಳು ಶುಭ ಕೋರಿ ಹರಸಿದರು.
ರಾಜೇಶ್ ಭಂಡಾರಿ ಬಂಟ್ವಾಳದ ಹೆಸರಾಂತ ಸಿವಿಲ್ ಇಂಜಿನಿಯರ್ ಆಗಿದ್ದು , ನೂರಾರು ಮನೆ, ದೈವಸ್ಥಾನ, ದೇವಸ್ಥಾನ, ಸಭಾಭವನ ನಿರ್ಮಾಣ ಮಾಡಿರುತ್ತಾರೆ.
ಇವರ ನೂತನ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಆಯುಷ್ಯ ಸಮೃದ್ಧವಾಗಿರಲಿ. ಭಗವಂತನು ಇವರ ಸಕಲ ಇಷ್ಟಾರ್ಥಗಳನ್ನೂ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
– ಭಂಡಾರಿವಾರ್ತೆ.