January 18, 2025
bhandary-scholorship
ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯವು ಪ್ರತೀ ವರ್ಷದಂತೆ ಈ ವರ್ಷವೂ ವಲಯಕ್ಕೆ ಸಂಬಂಧಿಸಿದ ಅರ್ಹ ಬಡ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸುತ್ತಿದೆ .
  • ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯಕ್ಕೆ ಸೇರಿದ ಅರ್ಹ ಬಡ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. 
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿ /ವಿದ್ಯಾರ್ಥಿನಿ ಅಥವಾ ಅವರ ಪೋಷಕರು  ಕಡ್ಡಾಯವಾಗಿ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದಲ್ಲಿ 2018 ರ ಮಾರ್ಚ್ 30 ರ ಮೊದಲು ಸದಸ್ಯತ್ವ ಹೊಂದಿರಬೇಕು .
  • ವಿದ್ಯಾರ್ಥಿ ವೇತನದ ಅರ್ಜಿಯು ವಲಯಕ್ಕೆ ಸಂಬಂಧಪಟ್ಟ ಸ್ಥಳೀಯ ಘಟಕ ದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಂದ ಸೂಕ್ತ ರೀತಿಯ ಪರಿಶೀಲನೆ ನಡೆಸಿ ಶಿಫಾರಸ್ಸನ್ನು ಹೊಂದಿರಬೇಕು.
  • ಅರ್ಜಿ ನಮಗೆ ತಲುಪಲು ಕೊನೆಯ ದಿನಾಂಕ ಅಕ್ಟೋಬರ್ 30 , 2018 .
  • ಅರ್ಜಿಯನ್ನು ಈ ಕೆಳಗಿನ ಲಿಂಕ್ ನಿಂದ ಡೌನಲೋಡ್ ಮಾಡಿಕೊಂಡು ತುಂಬಿಸಿ , ಅರ್ಜಿಯಲ್ಲಿ ನಮೂದಿಸಿರುವ ಸಂಘದ ಕಚೇರಿಯ ವಿಳಾಸಕ್ಕೆ ನಿಗಧಿತ ದಿನಾಂಕದ ಒಳಗೆ ತಲುಪುವಂತೆ ಕಳುಹಿಸಿಕೊಡಬೇಕು .                                               

ಅರ್ಜಿ ನಮೂನೆ (Click Here to Print)

                                                                                                         

  • ಪ್ರಿಂಟ್ ಮಾಡುವುದು ಹೇಗೆ ?

ಚಿತ್ರ 1 – ನೀವು ಮೇಲಿನ ಲಿಂಕ್ ತೆರೆದಾಗ ಅರ್ಜಿ ನಮೂನೆ ತೆರೆಯುತ್ತದೆ ಪ್ರಿಂಟ್ ಮಾಡಲು ಚಿತ್ರದಲ್ಲಿ ತೋರಿಸಿರುವಂತೆ ಮಾಡಿ .

 

ಚಿತ್ರ 2. ಇಲ್ಲಿ print ಎಂಬಲ್ಲಿ ಕ್ಲಿಕ್ ಮಾಡಿ ಪ್ರಿಂಟ್ ಮಾಡಿಕೊಂಡು ವಿವರ ತುಂಬಿ ಸಂಘದ ವಿಳಾಸಕ್ಕೆ ಕಳುಹಿಸಿಕೊಡಿ .ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ ಈ ಕೆಳಗಿನ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು. 

ಪ್ರಸಾದ್ ಮುನಿಯಾಲ್
ಪ್ರಕಾಶ್ ಕುತ್ತೆತ್ತೂರು 
ಪ್ರದೀಪ್ ಪಲಿಮಾರ್
                                           
ಅಂತಿಮ ನಿರ್ಧಾರವನ್ನು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯ ಕಾದಿರಿಸಿದೆ.                                                                                         
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು
ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯ.

Leave a Reply

Your email address will not be published. Required fields are marked *