September 20, 2024

ದ್ವಿತೀಯ ಪಿ.ಯು.ಸಿ. ವಾಣಿಜ್ಯ   ವಿಭಾಗದ  ಪರೀಕ್ಷೆಯಲ್ಲಿ  ಮಂಗಳೂರು ಸೇಂಟ್ ಆಗ್ನೆಸ್  ಪಿ.ಯು. ಕಾಲೇಜಿನ ವಿದ್ಯಾರ್ಥಿನಿ  ಕು॥ ಪ್ರವಲಿಕ  ಇವರು 558 ( 93% ) ಅತ್ಯುತ್ತಮ ಶ್ರೇಣಿಯ ಅಂಕಗಳನ್ನು ಪಡೆದು ಕಾಲೇಜ್ ಗೆ ಪೋಷಕರಿಗೆ ಹಾಗೂ ಸಮಾಜಕ್ಕೆ ಕೀರ್ತಿಯನ್ನು ತಂದಿದ್ದಾರೆ. ಸಂಖ್ಯಾಶಾಸ್ತ್ರ ದಲ್ಲಿ 100 ಅಂಕಗಳನ್ನು ಗಳಿಸಿ  ಉತ್ತಮ ಸಾಧನೆ  ಮಾಡಿದ್ದಾರೆ  ಕ್ರೀಡಾಪಟುವಾಗಿರುವ ಈಕೆ ಹ್ಯಾಂಡ್ಬಾಲ್ ಸ್ಪರ್ಧೆಯ ರಾಜ್ಯ ಮಟ್ಟದ ಆಟಗಾರ್ತಿಯಾಗಿದ್ದು ಕಾಲೇಜಿನಲ್ಲಿ ತಂಡದ  ನಾಯಕಿಯಾಗಿರುತ್ತಾರೆ ಇವರು ಚೆಟ್ಟಿನಾಡು ಸಿಮೆಂಟ್   ಸಂಸ್ಥೆಯಲ್ಲಿ ಕರ್ನಾಟಕ  ದಕ್ಷಿಣ  ವಲಯದ ಪ್ರಬಂಧಕರಾಗಿರುವ ಶ್ರೀ  ಪ್ರವೀಣ್ ಕುಮಾರ್  ಪಡೀಲ್, ಮಂಗಳೂರು ಮತ್ತು  ಶ್ರೀಮತಿ ರೇಣುಕಾ ಪ್ರವೀಣ್  ದಂಪತಿಯ ಪುತ್ರಿ.‌   

ಚಾರ್ಟೆಡ್ ಅಕೌಂಟೆಂಟ್ ಆಗಬೇಕೆಂಬ ಕನಸು ಕಂಡಿರುವ ಈಕೆಯ ಕನಸು ಹೊಂದಿರುವ ಈಕೆಯ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆ ಯ ವಿಚಾರವಾಗಿದ್ದು, ಸಾಧನೆಯನ್ನು ಶ್ಲಾಘಿಸುತ್ತಾ , ಕನಸುಗಳು ನನಸಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು  ಭಂಡಾರಿ ವಾರ್ತೆ ಶುಭಹಾರೈಸುತ್ತದೆ. 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *