January 18, 2025
Danush VD

ಬೆಳ್ತಂಗಡಿ ವೇಣೂರಿನ ಶ್ರೀ ದಯಾನಂದ ಭಂಡಾರಿ ಮತ್ತು ಅನುಷಾ ಡಿ ಭಂಡಾರಿ ದಂಪತಿಗಳ ಪುತ್ರ ಧನುಷ್ ವಿ ಡಿ ಇವರು 2018-19 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಣಾನ ವಿಭಾಗದಲ್ಲಿ 525 ಅಂಕ ಗಳಿಸುವುದರೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇವರು ಮೂಡಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಸೈನ್ಸ್ ಮತ್ತು ಕಾಮರ್ಸ್ ಪಿ ಯು ಕಾಲೇಜಿನ ವಿದ್ಯಾರ್ಥಿ. ಇವರ ಈ ಸಾಧನೆ ತನ್ನ ವಿದ್ಯಾಸಂಸ್ಥೆಯ, ಗುರುಗಳ, ಊರಿನ ಮತ್ತು ಹೆತ್ತವರ ಕೀರ್ತಿಯನ್ನು ಹೆಚ್ಚಿಸಿದೆ.


ಇವರ ಈ ಅತ್ಯನ್ನತ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆಯ ವಿಚಾರವಾಗಿದ್ದು, ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಧನುಷ್ ರವರನ್ನು ಅಭಿನಂದಿಸುತ್ತದೆ. ಮತ್ತು ಇವರ ಮುಂದಿನ ಶಿಕ್ಷಣ ಮತ್ತು ಜೀವನ ಉಜ್ವಲವಾಗಿರಲಿ ಎಂದು ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *