ಈ ಆಯುರ್ವೇದ ಮೂಲಿಕೆಗಳು ಮರೆವಿನ ನಿವಾರಣೆಗೆ ಒಳ್ಳೆಯದು ನೋಡಿ
ಆಯುರ್ವೇದ ಮೂಲಿಕೆಗಳನ್ನು ಸತತವಾಗಿ ಬಳಸುತ್ತಾ ಬಂದರೆ ಮರೆವಿನ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಅವು ಯಾವವು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಮರೆವು ಎಲ್ಲರಿಗೂ ಸಹಜ. ಅಯ್ಯೋ ಇಲ್ಲಿಟ್ಟಿದ್ದೆ ವಸ್ತುವನ್ನು ಎಲ್ಲೋಯ್ತು ಅಂತ ಹುಡುಕುತ್ತೇವೆ. ಕೆಲವೊಮ್ಮೆ ಕೈಯಲ್ಲೇ ಮೊಬೈಲ್ ಹಿಡಿದು ಮನೆಯಲ್ಲೇ ಜಾಲಾಡುವವರಿರುತ್ತಾರೆ. ಇಂತಹ ಮರೆಗುಳಿತನ ಅಪಾಯಕಾರಿಯೇ. ಹೀಗಾಗಿ ಮರೆವನ್ನು ಆಹಾರ ಪದ್ಧತಿಯಿಂದ ಮರೆಸಬಹುದಾಗಿದೆ.
ಒಂದಷ್ಟು ಆಯುರ್ವೇದ ಮೂಲಿಕೆಗಳನ್ನು ಸತತವಾಗಿ ಬಳಸುತ್ತಾ ಬಂದರೆ ಮರೆವಿನ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಅವು ಯಾವವು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಬಾದಾಮಿ
ಮೆದುಳಿನ ಕಾರ್ಯ ಕ್ಷಮತೆಯನ್ನು ಉತ್ತಮವಾಗಿಸಲು ಬಾದಾಮಿ ಅತ್ಯುತ್ತಮ ಆಹಾರವಾಗಿದೆ. ಮರೆಗುಳಿತನವನ್ನು ನಿವಾರಿಸಲು ಬಾದಾಮಿಯ ಸೇವನೆ ಸಹಾಯ ಮಾಡುತ್ತದೆ.
ಪ್ರತಿದಿನ ರಾತ್ರಿ 2 ಬಾದಾಮಿಯನ್ನು ಹಾಲು ಅಥವಾ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನೆನೆಪಿನ ಶಕ್ತಿ ಉತ್ತಮವಾಗುತ್ತದೆ.
ಬ್ರಾಹ್ಮಿ, ಅಶ್ವಗಂಧ
ಆಯುರ್ವೇದ ಮೂಲಿಕೆಗಳಾದ ಬ್ರಾಹ್ಮಿ, ಅಶ್ವಗಂಧದ ಬಳಕೆ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಬಳಕೆ ಮಾಡುವುದರಿಂದ ಮೆದುಳನ್ನು ಚುರುಕಾಗಿ ಇರಿಸಿಕೊಳ್ಳಬಹದು.
ಬ್ರಾಹ್ಮಿ (ಒಂದೆಲಗ) ಎಲೆಯ ಜ್ಯೂಸ್‌ನ್ನು ದಿನನಿತ್ಯ ಸೇವನೆ ಮಾಡಿದರೆ ಮರೆವನ್ನೂ ನಿವಾರಿಸಬಹುದು ಜೊತೆಗೆ ರೋಗ ನಿರೋಧಕ ಶಕ್ತಿಯೂ ಉತ್ತಮವಾಗುತ್ತದೆ.
ನೆಲ್ಲಿಕಾಯಿ ಮತ್ತು ವಿಟಮಿನ್ ಸಿ
ವಿಟಮಿನ್ ಸಿಯುಕ್ತ ಆಹಾರಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಉತ್ತಮವಾಗುತ್ತದೆ. ಜೊತೆಗೆ ನೆನಪಿನ ಶಕ್ತಿಯೂ ಚುರುಕಾಗುತ್ತದೆ.
ನೆಲ್ಲಿಕಾಯಿ ಜ್ಯೂಸ್, ಕಿತ್ತಳೆ ಹಣ್ಣು, ಮೂಸಂಬಿ, ಬ್ರೊಕೋಲಿಯಂತಹ ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮರೆವನ್ನು ಹೊಡೆದೋಡಿಸಬಹುದು.
ಮೀನಿನ ಎಣ್ಣೆ
ಸಸ್ಯಾಹಾರಿಗಳಿಗೆ ನೆನಪಿನ ಶಕ್ತಿಯನ್ನು ಉತ್ತಮವಾಗಿಸಲು ಮೀನಿನ ಎಣ್ಣೆ ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿರುವ ಒಮೆಗಾ 3 ಅಂಶವು ಬುದ್ಧಿ ಮತ್ತೆಯನ್ನು ಚುರುಕಾಗಿಸುತ್ತದೆ.
ಮೆದುಳಿನ ಕಾರ್ಯವನ್ನು ಉತ್ತಮವಾಗಿಸುವ ಮೂಲಕ ಮರೆವನ್ನು ಇಲ್ಲವಾಗಿಸುತ್ತದೆ. ಒಮೆಗಾ 3 ಇರುವ ಮೆಂತೆ ಕಾಳನ್ನೂ ಕೂಡ ನೀವು ನೆನಪಿನ ಶಕ್ತಿ ವೃದ್ಧಿಗೆ ಬಳಸಬಹುದಾಗಿದೆ.
ದಾಲ್ಚಿನಿ
ದಾಲ್ಚಿನಿ ಮಾನಸಿಕವಾಗಿ ಕ್ರಿಯಾಶೀಲರಾಗಿರುವಂತೆ ಮಾಡುತ್ತದೆ. ಹೀಗಾಗಿ ಅಡುಗೆಯಲ್ಲಿ ಚಿಟಿಕೆ ದಾಲ್ಚಿನಿಯನ್ನು ಬೆರೆಸಿ ಸೇವನೆ ಮಾಡಿ. ಅಥವಾ ಅದರ ಪರಿಮಳವನ್ನು ತೆಗೆದುಕೊಂಡರೂ ಆಹ್ಲಾದತೆ ಸಿಗುತ್ತದೆ.
ಮರೆವಿನ ನಿವಾರಣೆಗೆ ಇದು ನಿಧಾನವಾಗಿ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಡಯೆಟ್ ಪಟ್ಟಿಯಲ್ಲಿ ಮರೆಯದೇ ದಾಲ್ಚಿನಿಯನ್ನು ಸೇರಿಸಿಕೊಳ್ಳಿ. ಮತ್ತೆಂದೂ ಮರೆಯದಂತೆ ಇದು ನೋಡಿಕೊಳ್ಳುತ್ತದೆ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ.ಕ