ಈ ಮನೆಮದ್ದು ಹೊಟ್ಟೆ ಬೊಜ್ಜು, ಗ್ಯಾಸ್ಟ್ರಿಕ್‌ನ್ನು ಕಡಿಮೆ ಮಾಡುತ್ತೆ ನೋಡಿ…
ಬೊಜ್ಜು ಹೆಚ್ಚಾಗಿ ಹೊಟ್ಟೆ ಮುಂದೆ ಬಂದಿದ್ದರೆ, ನೀವು ಮಾಡುವ ವ್ಯಾಯಾಮದ ಜೊತೆಗೆ ಲವಂಗ, ವೀಳ್ಯದೆಲೆ ಮತ್ತು ಓಂಕಾಳು ಸಹ ಪ್ರಯೋಜನ ಕಾರಿ ಎಂಬುದನ್ನು ಮರೆಯಬೇಡಿ….
ಇಂದಿನ ಯುವ ಪೀಳಿಗೆಯಲ್ಲಿ ಯಾರು ವ್ಯಾಯಾಮವನ್ನು ಮಾಡುತ್ತಾರೆ ಅವರನ್ನು ಬಿಟ್ಟು ಮಿಕ್ಕ ಜನರಿಗೆ ಸಾಮಾನ್ಯವಾಗಿ ಬೊಜ್ಜು ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಇದ್ದೇ ಇರುತ್ತದೆ.
ಇಂತಹ ಸಮಸ್ಯೆ ಒಮ್ಮೆ ಬಂದರೆ, ಅದರಿಂದ ಪಾರಾಗುವುದು ಬಹಳ ಕಷ್ಟ. ಆದರೆ ಕೆಲವೊಂದು ನೈಸರ್ಗಿಕ ವಿಧಾನಗಳ ಮೂಲಕ ಇದಕ್ಕೆ ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು.
ಅದು ನಮ್ಮ ಹಿಂದಿನ ಕಾಲದ ಜನರು ಊಟ ಆದ ಮೇಲೆ ಹಾಕಿಕೊಳ್ಳುತ್ತಿದ್ದ ಎಲೆ ಅಡಿಕೆ ವಿಧಾನ. ಆದರೆ ಇಲ್ಲಿ ಅಡಿಕೆಯ ಬದಲು ಓಂಕಾಳು ಮತ್ತು ಲವಂಗ ಬೇಕಾಗುತ್ತದೆ. ಇವುಗಳ ಮಿಶ್ರಣದ ರಸ ಸೇವನೆ ಮಾಡುವುದರಿಂದ ದೇಹದ ಜೀರ್ಣಶಕ್ತಿ ಹೆಚ್ಚಾಗುತ್ತದೆ ಮತ್ತು ಬೊಜ್ಜು ಕಡಿಮೆಯಾಗುತ್ತದೆ. ಇದರಿಂದ ಕ್ರಮೇಣವಾಗಿ ನಿಮ್ಮ ದೇಹದ ತೂಕ ಕೂಡ ನಿಯಂತ್ರಣಕ್ಕೆ ಬರುತ್ತದೆ.
ಇದು ಹೇಗೆ ಕೆಲಸ ಮಾಡುತ್ತೆ?
- ವೀಳ್ಯದ ಎಲೆ ಜೊತೆ, ಅಜ್ವೈನ್ ಅಂದರೆ ಓಂಕಾಳು ಮತ್ತು ಲವಂಗ ಮಿಶ್ರಣ ಮಾಡಿ ಅದರ ರಸ ಸೇವನೆ ಮಾಡುವುದರಿಂದ ನಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.
- ಹೊಟ್ಟೆಯಲ್ಲಿ ಆಮ್ಲೀಯತೆ ಕಡಿಮೆ ಯಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಇರುವುದಿಲ್ಲ. ಪ್ರಮುಖವಾಗಿ ಹೀಗೆ ವೀಳ್ಯದೆಲೆ ಮತ್ತು ಲವಂಗ ಹಾಗೂ ಅಜ್ವೈನ ರಸ ಸೇವನೆ ಮಾಡುವುದರಿಂದ ನಮ್ಮ ಕರುಳಿನ ಭಾಗದಲ್ಲಿ ಚಲನೆ ಹೆಚ್ಚಾಗಿ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
ಇದರ ಬಳಕೆ ಹೇಗೆ?
- ಒಂದು ವೀಳ್ಯದೆಲೆ ಮತ್ತು ಒಂದು ಲವಂಗ ತೆಗೆದುಕೊಂಡು ಅದಕ್ಕೆ ಅರ್ಧ ಟೀ ಚಮಚ ಅಜ್ವೈನ್ ಕಾಳು ಗಳನ್ನು ಸೇರಿಸಿ ಬಾಯಿಯಲ್ಲಿ ಹಾಕಿಕೊಂಡು ಅದರ ರಸ ಸೇವನೆ ಮಾಡಲು ಮುಂದಾಗಿ. ಕ್ರಮೇಣವಾಗಿ ನಿಮ್ಮ ಬಾಯಿಯಲ್ಲಿ ಸಲೈವಾ ಹೆಚ್ಚಾಗುವುದನ್ನು ನೀವು ಗಮನಿಸುತ್ತೀರಿ.
- ನೀವು ಇದನ್ನು ಹಾಗೆ ಸಂಪೂರ್ಣವಾಗಿ ನುಂಗಿ. ಇದು ನಿಮ್ಮ ಹೊಟ್ಟೆಯ ಭಾಗವನ್ನು ಹಾಗೂ ಜೀರ್ಣಾಂಗವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಇದನ್ನು ಯಾವಾಗ ಸೇವನೆ ಮಾಡಬೇಕು? ದಿನಕ್ಕೊಮ್ಮೆ ಇದನ್ನು ಸೇವನೆ ಮಾಡಿದರೆ ಸಾಕು.
ಗಮನಿಸಬೇಕಾದ ಅಂಶ
ವೀಳ್ಯದೆಲೆ ಮತ್ತು ಓಂಕಾಳು ಸ್ವಲ್ಪ ಗಾಢವಾದ ರುಚಿ ಹೊಂದಿರುತ್ತದೆ. ಹೀಗಾಗಿ ಇದನ್ನು ಜಗಿಯಬೇಡಿ. ಸುಮ್ಮನೆ ಹಾಗೆ ಬಾಯಿಯಲ್ಲಿ ಹಾಕಿಕೊಂಡು ಅದರ ರಸ ಕುಡಿಯಿರಿ. ಬೇಕೆಂದರೆ ಮಧ್ಯೆ ಮಧ್ಯೆ ನೀರು ಸಹ ಕುಡಿಯಿರಿ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ:ಕೆ ಪಿ