
ಮೂಡಬಿದ್ರೆ ಅಲಂಗಾರು ಬಸವನ ಕಜೆ ಶ್ರೀಸುರೇಶ್ ಭಂಡಾರಿ ಯವರ ಪತ್ನಿ ಹಾಗೂ ಪಲಿಮಾರು ಶ್ರೀ ಶಂಕರ್ ಭಂಡಾರಿ ಮತ್ತು ಶ್ರೀಮತಿ ವೇದಾವತಿ ಶಂಕರ್ ಭಂಡಾರಿ ದಂಪತಿಗಳ ಪುತ್ರಿ ಶ್ರೀಮತಿ ಶ್ರೀನಿಧಿ ಸುರೇಶ್ ಯವರ ಸೀಮಂತ ದಿನಾಂಕ 25/2/2018 ಆದಿತ್ಯವಾರ ಮೂಡಬಿದ್ರೆ ಅಲಂಗಾರು ಬಸವನ ಕಜೆ ಶ್ರೀ ಶ್ರೀಧರ ಭಂಡಾರಿ ಮತ್ತು ಶ್ರೀಮತಿ ಇಂದಿರಾ ಶ್ರೀಧರ್ ರವರ ಮನೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.


ಸೀಮಂತದ ಶುಭ ಸಂಭ್ರಮದಲ್ಲಿ ಬಂಧು ಮಿತ್ರರು ಅಪಾರ ಸಂಖ್ಯೆಯಲ್ಲಿ ಕುಟುಂಬಸ್ಥರು ಹಾಗೂ ಹಿತೈಷಿಗಳು ಆಗಮಿಸಿ ಶ್ರೀಮತಿ ಶ್ರೀನಿಧಿ ಸುರೇಶ್ ರವರಿಗೆ ಆಶೀರ್ವದಿಸಿ ಶುಭ ಹಾರೈಸಿದರು. ಶ್ರೀಮತಿ ಶ್ರೀನಿಧಿ ಸುರೇಶ್ ಭಂಡಾರಿ ಅವರಿಗೆ ಭಂಡಾರಿ ಕುಟುಂಬಗಳ ಮನೆ ಮನದ ಮಾತಾಗಿರುವ ಭಂಡಾರಿ ವಾರ್ತೆಯ ಶುಭ ಹಾರೈಕೆ.
–ಭಂಡಾರಿ ವಾರ್ತೆ